ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 27:
ಮಾಜಿ ಪ್ರಧಾನಿಗಳಾದ ಪಂಡಿತ ಜವಾಹರಲಾಲ ನೆಹರುವರ ಪುಣ್ಯ ತಿಥಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ನವಭಾರತ ನಿರ್ಮಾಣವನ್ನು ನಿರ್ಮಿಸಲು ಅಡಿಗಲ್ಲು ಹಾಕಿ, ದೇಶದ ಭದ್ರ ಬುನಾದಿಗಾಗಿ ಅಡಿಪಾಯ ಹಾಕಿದ ಸಾಕಾರ ಮೂರ್ತಿ, ಅನಕ್ಷರನ್ನು ಅಕ್ಷರಸ್ತರನ್ನಾಗಿ ಮಾಡಲು ಶಿಕ್ಷಣದ ವ್ಯವಸ್ಥೆಗೆ ಬಲವನ್ನು ನೀಡಲು ಭಾರತದಲ್ಲಿ ಹಲವಾರು, ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನುಡಿ ಬರೆದು ಸಾಕ್ಷರತೆಯಲ್ಲಿ ಮೈಲಿಗಲ್ಲು ನಿರ್ಮಾಣ ನಿರ್ಮಾಣ ಮಾಡಿ ಧೀರಂತ ನಾಯಕ, ಭಾರತದಾದ್ಯಂತ ಹಲವಾರು ಆಸ್ಪತ್ರೆಗಳನ್ನು ಕಟ್ಟಲು ಆಜ್ಞೆ ಮಾಡಿದ ವೈದ್ಯಲೋಕದ ರಾಯಭಾರಿ, ಹಲವಾರು ನದಿ, ಸೇತುವೆಗಳನ್ನು ಕಟ್ಟಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನೀರಾವರಿಯ ತಜ್ಞ, ವಿಜ್ಞಾನಿಗಳ ಸಾಧನೆಯನ್ನು ಮನಗಂಡು ಇಸ್ರೋ ಬಾಹ್ಯಾಕಾಶ ಸಂಸ್ಥೆಯನ್ನು ಸೃಷ್ಠಿಸಿದ ವಿಜ್ಞಾನಿಗಳ ಅಚ್ಚು ಮೆಚ್ಚಿನ ನಾಯಕ, ಸರ್ವಜನಾಂಗದ ಶಾಂತಿಯ ತೋಟದ ಪರಿಪಾಲಕ, ಸಾವಿರಾರು ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ ಪ್ರಜಾಸೇವಕ ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ಜಗತ್ ಪ್ರಸಿದ್ಧರಾದವರು ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಐ. ಎಂ. ಇಂಡಿಕರ ವಕೀಲರು, ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ದೇಸು ಚವ್ಹಾಣ ಬ್ಲಾಕ್ ಅಧ್ಯಕ್ಷರುಗಳಾದ ಜಮೀರಹ್ಮದ ಬಕ್ಷಿ, ಆರತಿ ಶಾಹಪೂರ, ಭಾರತಿ ಹಡಪದ, ಅಬುಬಕರ ಕಂಬಾಗಿ, ಐಜಾಜ ಮುಕ್ಬಿಲ್, ಮಹಿಬೂಬ ಕಲಾದಗಿ, ಅಕ್ಬರ್ ನದಾಫ, ಧರ್ಮರಾಜ ನಾಯಿಕ, ಗುಲಾಬ್ ಚವ್ಹಾಣ, ದಿಲೀಪ ಪ್ರಭಾಕರ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಜವಾಹರ್ ಲಾಲ್ ನೆಹರು ಪುಣ್ಯತಿಥಿ


