ಸಪ್ತಸಾಗರ ವಾರ್ತೆ,ವಿಜಯಪುರ,ಜೂ.4:
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಶೇ.90ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ಮಿನಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರಲ್ಲಿ ಯಾವುದೇ ಗೊಂದಲಗಳಾಗದಂತೆ ಪಾರದರ್ಶಕವಾಗಿ ಎಸ್.ಐ.ಆರ್ ಪ್ರಕ್ರಿಯೆ ನಡೆಲಾಗುವುದು. ಅರ್ಹ ಯಾವೊಬ್ಬ ಮತದಾರನೂ ಪಟ್ಟಿಯಿಂದ ಹೊರಗುಳಿಯಬಾರದು. ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ. 90ರಷ್ಟು ಮ್ಯಾಪಿಂಗ್ ಆಗಿದೆ ಎಂದರು.
ವಿಶೇಷ ಪರಿಷ್ಕರಣೆ ಅಂಗವಾಗಿ ಜೂನ್ 20 ರಿಂದ 29ರವರೆಗೆ ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯಗಳು ನಡೆಯಲಿವೆ. ಜೂನ್ 30 ರಿಂದ ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ.
ತದನಂತರ ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ನೋಟಿಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು ಎಂದರು. ಅಕ್ಟೋಬರ್ 7 ರಂದು ಮತದಾರರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದರು.
2092 ಬಿಎಲ್‌ಒಗಳು:
ವಿಜಯಪುರ ಜಿಲ್ಲೆಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು
ಬಿಎಲ್ ಒಗಳ ಮೇಲ್ವಿಚಾರಕರ ವಿವರ ಆಯಾ ವಿಧಾನಸಭಾವಾರು ವಿವರ ನೀಡಿದರು.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, 246 ಬಿಎಲ್‌ಒಗಳು ಹಾಗೂ 20 ಬಿಎಲ್ ಒಗಳ ಮೇಲೆ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 252 ಮತಗಟ್ಟೆಗಳಿಗೆ 252 ಬಿಎಲ್‌ಒಗಳಿದ್ದು, ಅವರಿಗೆ 23 ಜನ ಮೇಲ್ವಿಚಾರಕರಿದ್ದಾರೆ.
ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿ 231 ಮತಗಟ್ಟೆಗಳಿಗೆ 231 ಬಿಎಲ್‌ಒಗಳಿದ್ದು, 21 ಮೇಲ್ವಿಚಾರಕರಿದ್ದಾರೆ.
ಬಬಲೇಶ್ವರ ಮತಕ್ಷೇತ್ರದಲ್ಲಿ ಒಟ್ಟು 244 ಮತಗಟ್ಟೆಗಳಿದ್ದು, 244 ಬಿಎಲ್ ಒಗಳು ಕಾರ್ಯನಿರ್ವಹಿಸಲಿದ್ದು, ಇವರ ಮೇಲೆ 23 ಮೇಲ್ವಿಚಾರಕರಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರದಲ್ಲಿ ಒಟ್ಟು 285 ಮತಗಟ್ಟೆಗಳಿದ್ದು, 285 ಬಿಎಲ್ ಓಗಳಿಗೆ 28 ಮೇಲ್ವಿಚಾರಕರು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ನಾಗಠಾಣ ವಿಧಾನಸಭೆ ಕ್ಷೇತ್ರದಲ್ಲಿ 299 ಮತಗಟ್ಟೆಗಳಿದ್ದು, 299 ಬಿಎಲ್ ಒಗಳಿಗೆ 30 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.
ಇಂಡಿ ಮತಕ್ಷೇತ್ರದಲ್ಲಿ 268 ಮತಗಟ್ಟೆಗಳಿದ್ದು, 268 ಬಿಎಲ್ ಒಗಳು ಹಾಗೂ 33 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ.
ಸಿಂದಗಿ ಮತಕ್ಷೇತ್ರದಲ್ಲಿ ಒಟ್ಟು 267 ಮತಗಟ್ಟೆಗಳಿದ್ದು, 267 ಬಿಎಲ್ ಒಗಳು ಹಾಗೂ 21 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 2092 ಮತಗಟ್ಟೆಗಳಿಗೆ 2092 ಬಿಎಲ್ ಒಗಳಿದ್ದು, ಅವರ ಮೇಲೆ 199 ಜನ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಿಲ್ಲೆಯ ಮತದಾರರ ವಿವರ ಆಯಾ ವಿಧಾನಸಭಾವಾರು
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, 1,1,4252 ಗಂಡು, 1,14,527 ಮಹಿಳೆಯರು ಇತರೇ 32 ಸೇರಿ ಒಟ್ಟು 2,28,811 ಮತದಾರರಿದ್ದಾರೆ.
ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಒಟ್ಟು 252 ಮತಗಟ್ಟೆಗಳ ಸಂಖ್ಯೆಯಿದ್ದು, 1,17,478 ಪುರುಷರು, 1,13,818 ಮಹಿಳೆಯರು 29 ಇತರೇ ಸೇರಿ ಒಟ್ಟು 2,31,325 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳಿದ್ದು, 1,11,891 ಪುರುಷರು, 1,10,456 ಮಹಿಳೆಯರು, ಇತರೇ 22 ಸೇರಿ ಒಟ್ಟು 2,22,369 ಮತದಾರರಿದ್ದಾರೆ.
ಬಬಲೇಶ್ವರದಲ್ಲಿ ಒಟ್ಟು 244 ಮತಗಟ್ಟೆಗಳಿದ್ದು, 1,13,803 ಪುರುಷರು, 1,12,025 ಮಹಿಳೆಯರು, ಇತರೇ 10 ಸೇರಿ ಒಟ್ಟು 2,25,838 ಮತದಾರರಿದ್ದಾರೆ. ವಿಜಯಪುರ ನಗರ ಮತಕ್ಷೇತ್ರದಲ್ಲಿ ಒಟ್ಟು 285 ಮತಗಟ್ಟೆಗಳಿದ್ದು, 1,43,010 ಪುರುಷರು, 1,49,080 ಮಹಿಳೆಯರು, ಇತರೇ 89 ಸೇರಿ 2,92,179 ಮತದಾರರಿದ್ದಾರೆ. ನಾಗಠಾಣದಲ್ಲಿ 299 ಮತಗಟ್ಟೆಗಳಿದ್ದು, 1,42,148 ಪುರುಷರು, 1,37,031 ಮಹಿಳೆಯರು, ಇತರೇ 12 ಸೇರಿ 2,79,191 ಮತದಾರರಿದ್ದಾರೆ.
ಇಂಡಿ ಮತಕ್ಷೇತ್ರದಲ್ಲಿ 268 ಮತಗಟ್ಟೆಗಳಿದ್ದು, 1,30,863 ಪುರುಷರು, 1,24,455 ಮಹಿಳೆಯರು, ಇತರೇ 20 ಸೇರಿ ಒಟ್ಟು 2,55,338 ಮತದಾರರಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ 267 ಮತಗಟ್ಟೆಗಳಿದ್ದು, 1,27,360 ಪುರುಷರು, 1,23,295 ಮಹಿಳೆಯರು, ಇತರೇ 34 ಸೇರಿ 2,50,689 ಮತದಾರರಿದ್ದಾರೆ.
ಜಿಲ್ಲೆಯ ಒಟ್ಟು 2092 ಮತಗಟ್ಟೆಗಳಿದ್ದು, 10,00,805 ಪುರುಷರು, 9,84,687 ಮಹಿಳೆಯರು ಇತರೇ 248 ಸೇರಿ ಒಟ್ಟು 1,9,85,740 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಚುನಾವಣಾ ಆಯೋಗದ https://voters.eci.gov.in (Voters Service Portal) ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕರ್ನಾಟಕ ಇವರ
Ceokarnataka.gov.in ಅಂತರ ಜಾಲ ತಾಣ ಸರ್ಚ್ ಮಾಡಿ ಮಾಹಿತಿ ಮತ್ತು ದಾಖಲೆಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಸ್ ಐಆರ್-2026ಕ್ಕೆ ಲಾಗಿನ್ ಆಗಿ ಬುಕ್ ಎ ಕಾಲ್ ರಿಕ್ವೆಸ್ಟ್ ವಿತ್ ಬಿಎಲ್ ಒ ಲಾಗಿನ್ ಆಗಿ ಸೈನ್ ಅಪ್ ಮಾಡಬೇಕು. ಬಳಿಕ ಎಸ್‌ಐಆರ್ 2026ರಲ್ಲಿ ನಿಮ್ಮ ಹೆಸರು ಹುಡುಕಿ
- ರೋಲ್‌ಗೆ ಹೋಗಿ, ಅಲ್ಲಿ ಎಪಿಕ್ ನಂಬರ್, ಮೊಬೈಲ್ ನಂಬರ್ ಹಾಗೂ ಒಟಿಪಿ ದಾಖಲಿಸಿ, ಆಗ 2002ರ ಮತದಾರರ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯ ಕ್ರಮ ಸಂಖ್ಯೆ ಮತ್ತು ಮತಗಟ್ಟೆ ಸಂಖ್ಯೆ ಮತ್ತು ಹೆಸರು, ಮತಗಟ್ಟೆ ಅಧಿಕಾರಿಯ ಹೆಸರು ಮತ್ತು ಮೊಬೈಲ್ ನಂ. ಮತ್ತು ಮತದಾರರ ನೋಂದಣಾಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ಪಡೆಯಬಹುದಾಗಿದೆ. ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಲು ವಿನಂತಿ ದಾಖಲಿಸಿ, ಅವರಿಂದ ಅವಶ್ಯಕ ಮಾಹಿತಿ ಪಡೆಯಬಹುದಾಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕಾರ್ಯದ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ನಂಬರ್: 1950ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಈ ವಿಶೇಷ ಪ್ರಕ್ರಿಯೆಯಲ್ಲಿ ಬಿಎಲ್ ಓಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದೂ ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ ಎಂದರು.
ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಎಲ್ಲ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡಿರುವ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಪರಿಷ್ಕರಣೆ ಪ್ರಕ್ರಿಯೆ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ, ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು (ಎನ್ಯುಮರೇಶನ್) ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇಆರ್‌ಒಗಳ ಸಂಪರ್ಕ:
ಮುದ್ದೇಬಿಹಾಳ ಇಆರ್ ಒ ಬದ್ರೂದ್ದೀನ್ ಸೌದಾಗರ, ಮೊ. ನಂ: 9448392005, ದೇವರಹಿಪ್ಪರಗಿ ಇಆರ್ ಒ ಚಿದಾನಂದ ಗುರುಸ್ವಾಮಿ, ಮೊ. ನಂ: 9483966271, ಬಸವನಬಾಗೇವಾಡಿ ಇಆರ್ ಒ ಎಂ.ಬಿ. ನಾಗಠಾಣ, ಮೊ. 9448426549, ಬಬಲೇಶ್ವರ ಇಆರ್ ಒ ಗುರುನಾಥ ದಡ್ಡೆ, ಮೊ. ನಂ: 9599909724, ವಿಜಯಪುರ ನಗರದ ಇಆರ್ ಒ ವಿಜಯ ಮೆಕ್ಕಳಕಿ, ಮೊ. 9739582619, ನಾಗಠಾಣ ಇಆರ್ ಒ ರಾಜಶೇಖರ ಡಂಬಳ, ಮೊ. 9902581988, ಇಂಡಿ ಇಆರ್ ಒ ಚಿದಾನಂದ ಗುರುಸ್ವಾಮಿ, ಮೊ. 9483966271, ಸಿಂದಗಿ ಇಆರ್ ಒ ವಿನಯಕುಮಾರ ಪಾಟೀಲ, ಮೊ. 8951420399 ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಇಆರ್ ಒ ವಿವರ: ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಕೀರ್ತಿ ಚಳಕ್, ಎ.ಡಿ. ಅಮರವಾಡಗಿ ಹಾಗೂ ವಿನಯ ಹೂಗಾರ ಅವರನ್ನು ನೇಮಕ ಮಾಡಲಾಗಿದೆ. ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ನಿಂಗಪ್ಪ ಬಿರಾದಾರ, ವೈ.ಎಸ್. ಸೋಮನಕಟ್ಟಿ, ಎ.ಡಿ. ಅಮರವಾಡಗಿ ಹಾಗೂ ವಿನಯ ಹೂಗಾರ ಅವರನ್ನು ನೇಮಕ ಮಾಡಲಾಗಿದೆ. ಬಸವನಬಾಗೇವಾಡಿಗೆ ವೈ.ಎಸ್. ಸೋಮನಕಟ್ಟಿ, ಸಂತೋಷ ಮ್ಯಾಗೇರಿ, ಎ.ಡಿ. ಅಮರವಾಡಗಿ ಅವರನ್ನು ನೇಮಕ ಮಾಡಲಾಗಿದೆ. ಬಬಲೇಶ್ವರ ಮತಕ್ಷೇತ್ರಕ್ಕೆ ಶಾಂತಲಾ ಚಂದನ್, ಪ್ರಶಾಂತ ಚನಗೊಂಡ, ಸುರೇಶ ಚವಲಾರ ಅವರನ್ನು ನೇಮಕ ಮಾಡಲಾಗಿದೆ. ವಿಜಯಪುರ ನಗರ ಮತಕ್ಷೇತ್ರಕ್ಕೆ ಯು.ಎಸ್. ಗುಡ್ಡದ, ಸುರೇಶ ಚವಲಾರ ಅವರನ್ನು ನೇಮಕ ಮಾಡಲಾದರೆ, ನಾಗಠಾಣಕ್ಕೆ ಪ್ರಶಾಂತ ಚನಗೊಂಡ ಹಾಗೂ ಎಸ್.ಬಿ. ಇಂಗಳೆ ಅವರನ್ನು ನೇಮಕ ಮಾಡಲಾಗಿದೆ. ಇಂಡಿಗೂ ಎಸ್.ಬಿ. ಇಂಗಳೆ ಅವರನ್ನು ನೇಮಕ ಮಾಡಲಾಗಿದೆ. ಸಿಂದಗಿ ಮತಕ್ಷೇತ್ರಕ್ಕೆ ಕರೆಪ್ಪ ಬೆಳ್ಳಿ, ಬಿ.ಎಸ್. ಕಡಕಬಾವಿ, ಕರೆಪ್ಪ ಬೆಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಮನೆ ಗಣತಿ ಸಹಕಾರಕ್ಕೆ ಕೋರಿಕೆ:
ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳ ಮೂಲಕ ಗಣತಿ ನಮೂನೆ ತಲುಪಿಸಲಾಗುವುದು. ಇದರಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ಸಂಬಂಧಿಕರ ಹೆಸರು ಹಾಗೂ ವಿಧಾನಸಭಾ ಕ್ಷೇತ್ರದ ವಿವರಗಳು ಇರಲಿವೆ. ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಗಣತಿ ನಮೂನೆಗಳನ್ನು ತಲುಪಿದ ನಂತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ ಎಂದರು.ಸಾರ್ವಜನಿಕರು ಗಣತಿ ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು ಎಂದರು.
ಅಕ್ಟೋಬರ್ 7 ರಂದು ಅಂತಿಮ ಮತಪಟ್ಟಿ ಪ್ರಕಟ:
ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ನೊಟೀಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ ಆಗಸ್ಟ್ 5 ರಿಂದ 03 ಅಕ್ಟೋಬರವರೆಗೆ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳ ಇತ್ಯರ್ಥವಾದ ಬಳಿಕ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹಾಗೂ ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಜಿಲ್ಲಾಧಿಕಾರಿ ಕಚೇರಿಯ ತೇರದಾಳ ಉಪಸ್ಥಿತರಿದ್ದರು.


