ಲಂಚ: ಕೆ. ಬಿ. ಜೆ. ಎನ್. ಎಲ್ ಇಬ್ಬರು ಅಭಿಯಂತರರು ಲೋಕಾಯುಕ್ತ ಬಲೆಗೆ

ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 6:
ಲಂಚ ಪಡೆಯುತ್ತಿದ್ದ ಕೆಬಿಜೆಎನ್ ಎಲ್ ಇಬ್ಬರು ಅಭಿಯಂತರರು ಸಾಲೋಟಗಿ ಕಚೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸೇವಾಲಾಲ್ ಚೌವಾಣ, ಕಿರಿಯ ಅಭಿಯಂತರ ಸಾತಲಿಂಗಪ್ಪ ರೊಡಗಿ ಲೋಕಾಯುಕ್ತ ಬಲೆಗೆ ಬಿದ್ದ ಅಭಿಯಂತರರು.
ಕೆಬಿಜೆಎನ್ಎಲ್ ಕೆನಾಲ್ ಕಾಮಗಾರಿ ಪೂರೈಸಿದ 3,71,419 ಮೊತ್ತದ ಬಿಲ್ ಪಾಸ್ ಮಾಡಿ ಮೇಲಾಧಿಕಾರಿ ಕಚೇರಿಗೆ ಕಳುಹಿಸಲು ಅಭಿಯಂತರ ಸೇವಾಲಾಲ್ 10,000 ರೂ. ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ಅವರು 8,000 ರೂ. ಗಳ ಲಂಚದ ಬೇಡಿಕೆಯನ್ನು ಇಟ್ಟಿದ್ದರು.
ನಾನಾಸಾಹೇಬ ರೋಡಗಿ ಅವರು ಈ ಬಗ್ಗೆ ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯ ಪೃವತ್ತರಾಗಿ ಬಲೆ ಬೀಸಿ ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಇಬ್ಬರು ಅಭಿಯಂತರರನ್ನು ಬಂಧಿಸಿ ಕೋರ್ಟ್ ಗೆ ಹಾಜರಪಡಿಸಲಾಗಿದೆ. ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ ಡಿಎಸ್ಪಿ ಮಲ್ಲಿಕಾರ್ಜುನ ಎಸ್. ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ, ನಿಂಗಪ್ಪ ಪೂಜಾರಿ ಹಾಗೂ ಸಿಬ್ಬಂದಿ
ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this