ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 8:
ಸಮಸ್ತ ಬ್ರಾಹ್ಮಣ ಸಂಘಟನೆಗಳು ತಾಲೂಕು ಹಾಗೂ ಜಿಲ್ಲಾ ಘಟಕಗಳ ಸಹಕಾರದೊಂದಿಗೆ, ಶ್ರೀ ಚಿದಂಬರ ಸೇವಾ ಸಮಿತಿ ಮತ್ತು ಮಂಗಳಸೂತ್ರ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ಚಿದಂಬರೇಶ್ವರ ಸಾಂಸ್ಕೃತಿಕ ಭವನ, ರಿಂಗ್ ರೋಡ್, ಮನಗೂಳಿ ರಸ್ತೆಯಲ್ಲಿ
ನಡೆಯಲಿರುವ 68ನೇ ರಾಜ್ಯ ಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರ ಅನ್ವೇಷಣಾ ಸಮಾವೇಶದ ಬ್ಯಾನರ್ ಅನ್ನು ಅನಾವರಣಗೊಳಿಸಲಾಯಿತು.
ಈ ಸಮಾವೇಶವು ಜು. 11 ಮತ್ತು 12 ರಂದು ಎರಡು ದಿನಗಳ ಕಾಲ ನಡೆಯಲಿದೆ. ಜೊತೆಗೆ, ಕಲ್ಯಾಣ ಪ್ರಾಪ್ತಿಗಾಗಿ ಶ್ರೀ ಗಿರಿಜಾ ಕಲ್ಯಾಣೋತ್ಸವ ಮಹಾಸಂಕಲ್ಪ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ, ವೆಂಕಟೇಶ ಜೋಶಿ, ಡಾ. ವಿ. ಶ್ರೀನಿವಾಸನ್ ಗುರೂಜಿ (ಬೆಂಗಳೂರು), ಶಂಕರ ಭಟ್ಟ ಜೋಶಿ, ಪ್ರಕಾಶ ಅಕ್ಕಲಕೋಟ, ಸುಧೀರ ಕುಲಕರ್ಣಿ, ವಿಜಯ ಜೋಶಿ, ಗೋವಿಂದ ದೇಶಪಾಂಡೆ, ಆನಂದ ಕುಲಕರ್ಣಿ, ಕೃಷ್ಣ ಜಿ. ಕುಲಕರ್ಣಿ, ದತ್ತಾತ್ರೇಯ ಜೋಶಿ ಹಾಗೂ ಸಂಚಾಲಕ ಶ್ರೀನಿವಾಸ ಭಾರದ್ವಾಜ್ (ಮೈಸೂರು) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ 68ನೇ ರಾಜ್ಯ ಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರ ಅನ್ವೇಷಣಾ ಸಮಾವೇಶಕ್ಕೆ ಬ್ಯಾನರ್ ಅನಾವರಣ


