ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 9 :
ಸ್ವಾಭಿಮಾನಿ ಕರ್ನಾಟಕ ವೇದಿಕೆಯು
ಡಾ. ಸುಜಾತಾ.ಚಲವಾದಿ ಸೇರಿದಂತೆ ಹಲವರಿಗೆ 2025ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಯನ್ನು ಪ್ರಕಟಿಸಿದೆ.
ಡಾ. ಸಿ. ಸೋಮಶೇಖರ್
ಸರ್ವಮಂಗಳ ದತ್ತಿ ಪ್ರಶಸ್ತಿಗೆ ಡಾ. ಸುಜಾತಾ ಚಲವಾದಿ ಅವರ
‘ಮನುಷ್ಯ ಮತ್ತು ಪ್ರೀತಿ’ ಪ್ರಬಂಧ ಸಂಕಲನವನ್ನು ಆಯ್ಕೆ
ಮಾಡಲಾಗಿದೆ.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ
ಡಾ. ಆರ್.ಸುನಂದಮ್ಮ, ವೇದಿಕೆಯ ಅಧ್ಯಕ್ಷ ಡಾ. ದ್ವಾರನಕುಂಟೆ
ಪಾತಣ್ಣ ಹಾಗೂ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ
ಎಚ್.ಆರ್ ಸುಜಾತ ಅವರ ನೇತೃತ್ವದ ಸಮಿತಿಯು
ಪುರಸ್ಕೃತರನ್ನು ಆಯ್ಕೆ ಮಾಡಿದೆ. ಜೂ.13ರಂದು ಸಂಜೆ 5
ಗಂಟೆಗೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ
ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಡಾ.ಸುಜಾತಾ ಚಲವಾದಿ ಸ್ವಾಭಿಮಾನಿಪುಸ್ತಕ ಪ್ರಶಸ್ತಿಗೆ ಆಯ್ಕೆ


