ಸಪ್ತಸಾಗರ ವಾರ್ತೆ, ಬೆಂಗಳೂರು, ಜೂ. 9:
ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ ಮಹಿಳಾ ಮುನ್ನಡೆ ” ಯೋಜನೆಯಡಿ ರಾಜ್ಯದ ಸಾಧಕ ಮಹಿಳೆಯರ 54 ಪುಸ್ತಕಗಳನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಲಾಯಿತು.
ಈ ಯೋಜನೆ ಅಡಿ ಹಿರಿಯ ಪತ್ರಕರ್ತೆ ಕೆ. ಶಾಂತಕುಮಾರಿ ಬರೆದ ‘ ಕಮಲಾದೇವಿ ಚಟ್ಟೋಪಾಧ್ಯಾಯ ” ಪುಸ್ತಕವು ಬಿಡುಗಡೆಯಾಯಿತು. ಹಿರಿಯ ಪತ್ರಕರ್ತರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೋತ್ಸಾಹಿಸಲು ಮತ್ತೊಮ್ಮೆ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಹಾಗೂ ಮಾಜಿ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಪೊನ್ನಪ್ಪ, ಜಗದೀಶ, ಅಂಬಿಕಾ, ಫೋಟೋಗ್ರಾಫರ್ ಜಗದೀಶ, ಪುಸ್ತಕದ ಬರಹಗಾರ್ತಿ ಕೆ. ಶಾಂತಕುಮಾರಿ, ಜುಲ್ಫಿ ಕಾರ್ ಅಹಮದ್, ಗಂಡಸಿ ಸದಾನಂದ ಸ್ವಾಮಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಿರಿಯ ಪತ್ರಕರ್ತೆ ಕೆ. ಶಾಂತಕುಮಾರಿ ಸೇರಿ ಹಲವರ ಪುಸ್ತಕ ಬಿಡುಗಡೆ


