ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 11:
ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಜೂನ್ 15ರಂದು ಅಪ್ರೆಂಟಿಸ್ ಮೇಳ ಆಯೋಜಿಸಲಾಗಿದೆ.
ಜಾನ್ಸನ್ ಲಿಫ್ಟ್ ಅಂಡ್ ಎಸ್ಕಲೇಟರ್ಸ ಕಂಪನಿ ಈ ಕ್ಯಾಂಪಸ್ ಸಂದರ್ಶನ ಆಯೋಜಿಸಿದೆ. ಐಟಿಐ ನ ನಾಬಾ ಟ್ರೇಡುಗಳಲ್ಲಿ ಪಾಸಾದ ಮತ್ತು ದ್ವಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ 18 ರಿಂದ 25 ವರ್ಷದೊಳಗಿನ ತರಬೇತುದಾರರಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನ ನಡೆಯಲಿದೆ.
ಆಸಕ್ತ ತರಬೇತಿದಾರರು ಸೂಕ್ತ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬೇಕು ಎಂದು ತರಬೇತಿ ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಸಂತೋಷ ಕರಿಗಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9880716694 ಮತ್ತು 9916853605 ಸಂಪರ್ಕಿಸಬಹುದಾಗಿದೆ.
Editor
Rudrappa B Asangi
Editor
Managing Editor
Chetan Asangi
Managing Editor


