ಸಪ್ತಸಾಗರ ವಾರ್ತೆ,ವಿಜಯಪುರ, ಜೂ.14:
ನಗರದ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ದಿ ಪ್ರೆಸಿಡೆನ್ಸಿ ಶಿಕ್ಷಣ
ಮಹಾವಿದ್ಯಾಲಯದ 2025-26 ನೇ ಸಾಲಿನ ರೋಜರ್ಸ್ ಅಂಡ್ ರೋವರ್ಸ್
ಘಟಕದ ವತಿಯಿಂದ ಮಹಾ ವಿದ್ಯಾಲಯದ ಸಭಾಭವನದಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ರಾಜ್ಯ ಸಂಘಟನಾ ಆಯುಕ್ತ ಡಿ. ಬಿ. ಅತ್ತಾರ ಅವರು ಮಾತನಾಡಿ, “ವ್ಯಕ್ತಿ, ಪುಸ್ತಕ ಮತ್ತು ಸ್ಥಳ” ಎಂಬ ಮೂರು ಅಂಶಗಳು ವ್ಯಕ್ತಿತ್ವ ವಿಕಸನದ ಪ್ರಮುಖ ತಳಹದಿಗಳಾಗಿವೆ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ತರಬೇತಿ ಆಯುಕ್ತ ಎಸ್. ಎಸ್. ಬೊಮ್ಮನಹಳ್ಳಿ ಅವರು ಮಾತನಾಡಿ, ಬೆಳವಣಿಗೆ ಮತ್ತು ಬದಲಾವಣೆ ಜೀವನದ
ಮುಖ್ಯ ಅಂಶಗಳಾಗಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ನ ಒಂಬತ್ತು ನಿಯಮಗಳನ್ನು
ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಪಿ. ಎಸ್. ಕುಂಬಾರ ಅವರು, ದೇಶದ ಅಭಿವೃದ್ಧಿಯಲ್ಲಿ
ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಾಗೂ ಸ್ಕೌಟ್ ಮಾಸ್ಟರ್ ಆಗಿರುವ ಆರ್. ಆರ್.
ಎಲ್. ಕುಂಟೆ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ
ಪ್ರಾಚಾರ್ಯ ಡಾ. ಎಸ್. ಟಿ. ಬೋಳರೆಡ್ಡಿ ಅವರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ
ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮಹಾಂತೇಶ ನಾವಿ ನಿರೂಪಿಸಿದರು. ಡಾ. ಶಾರದಾ ವಂದಿಸಿದರು.
ಈ ಕಾರ್ಯಗಾರದಲ್ಲಿ ಸುಮಾರು 180 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
ಭಾಗವಹಿಸಿದ್ದರು.
ರೋಜರ್ಸ್ ಅಂಡ್ ರೋವರ್ಸ್ ಘಟಕದ ಕಾರ್ಯಗಾರ


