ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 10:
ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪರಮ ಪೂಜ್ಯ ಶ್ರೀ ಪ್ರಭಾಕರ ಮಠ (ತದ್ದೇವಾಡಿ) ಇವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವ್ಯಾಸ ಮಹರ್ಷಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಆಶೀರ್ವಚನ ನೀಡುತ್ತಾ ಗುರು ಬ್ರಹ್ಮ-ವಿಷ್ಣು- ಮಹೇಶ್ವರರ ಸ್ವರೂಪನಾಗಿದ್ದಾನೆ. ಗುರು ಅಂಧಕಾರದಿಂದ ನಮ್ಮನ್ನು ಬೆಳಕಿನಡೆಗೆ ಕರೆದುಕೊಂಡು ಹೋಗುತ್ತಾರೆ. ಗುರು ನಮಗೆ ಒಳ್ಳೆಯ ಮಾರ್ಗದರ್ಶನ ನೀಡಿ, ಸತ್ಯದ ಕಡೆ ಕರೆದು ಕೊಂಡು ಹೋಗುತ್ತಾರೆ. ಗುರು ಎನ್ನುವ ಶಿಲ್ಪಿ ನಮ್ಮನ್ನು ಸುಂದರವಾದ ಮೂರ್ತಿಯನ್ನಾಗಿ ಮಾಡುತ್ತಾರೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮಕ್ಕಳು ಏಕಪಾತ್ರಾಭಿನಯ ಮಾಡಿದರು ಹಾಗೂ ಗುರುವಿನ ಕುರಿತು ಹಾಡನ್ನು ಹಾಡಿದರು. ವಿದ್ಯಾರ್ಥಿನಿಯಾದ ಆಕಾಂಕ್ಷಾ ಬೊಂದರ್ಡೆ ಗುರುವಿನ ಮಹತ್ವದ ಕುರಿತು ಮಾತನಾಡಿದಳು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಫರೀನ ಖಾನ್ ಅವರು ಎಲ್ಲರಿಗೂ ಶುಭಾಶಯ ಕೋರಿದರು. ಶಿಕ್ಷಕಿಯಾದ ಉಮಾ ಬಡಾನೂರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ್, ಎ.ಎಚ್. ಸಗರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

Share