ಸಪ್ತಸಾಗರ ವಾರ್ತೆ,ಸಿಂದಗಿ, ಜು.12: ಸಿಂದಗಿಯ ವಿದ್ಯಾಚೇತನ ಪ್ರಕಾಶನವು ಪ್ರತಿವರ್ಷದಂತೆ 2025ನೇ ಸಾಲಿನ ರಾಜ್ಯ ಮಟ್ಟದ “ಬಾಲ ಸಾಹಿತ್ಯ ಪುರಸ್ಕಾರ” ಕ್ಕಾಗಿ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದೆ.
2025ರ ಜನವರಿ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಪ್ರಥಮ ಮುದ್ರಣಗೊಂಡ ಮಕ್ಕಳ ಸಾಹಿತ್ಯ ಕೃತಿಗಳು ಮಾತ್ರ ಸ್ಪರ್ಧೆಗೆ ಅರ್ಹವಾಗಿವೆ. ಕಥೆ, ಕವನ ಹಾಗೂ ಕಾದಂಬರಿ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವಿಭಾಗದ ವಿಜೇತರಿಗೆ ₹5,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಹದಿನೆಂಟು ವರ್ಷದೊಳಗಿನ ಬಾಲ ಲೇಖಕರೂ ತಮ್ಮ ಸ್ವರಚಿತ ಕೃತಿಗಳನ್ನು ಕಳುಹಿಸಬಹುದಾಗಿದೆ. ಅವರಿಗಾಗಿ ಪ್ರತಿ ವಿಭಾಗದಲ್ಲಿ ₹2,000 ನಗದು ಬಹುಮಾನ ಮತ್ತು “ಚಿಗುರು” ಪ್ರಶಸ್ತಿ ನೀಡಲಾಗುವುದು.
ಪ್ರತಿ ವಿಭಾಗದಲ್ಲಿ ಮೂರಕ್ಕಿಂತ ಕಡಿಮೆ ಕೃತಿಗಳು ಬಂದಲ್ಲಿ ಆ ವಿಭಾಗಕ್ಕೆ ಸ್ಪರ್ಧೆ ನಡೆಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಲೇಖಕರು ತಮ್ಮ ಕೃತಿಯ ನಾಲ್ಕು ಪ್ರತಿಗಳನ್ನು 2026ರ ಆಗಸ್ಟ್ 10ರೊಳಗಾಗಿ ಈ ವಿಳಾಸಕ್ಕೆ ನೋಂದಾಯಿತ ಅಂಚೆ (Registered Post) ಮೂಲಕ ಕಳುಹಿಸಬೇಕು. ಹ.ಮ. ಪೂಜಾರ
ಸಂಚಾಲಕರು, ವಿದ್ಯಾಚೇತನ ಪ್ರಕಾಶನ,
ಶ್ರೀ ಸಂಗಮೇಶ್ವರ ಬಡಾವಣೆ,
ಸಿಂದಗಿ – 586128,
ಜಿಲ್ಲೆ: ವಿಜಯಪುರ ಇಲ್ಲಿಗೆ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿದ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಈಗಾಗಲೇ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಅದೇ ವಿಭಾಗಕ್ಕೆ ಮತ್ತೆ ಕೃತಿ ಕಳುಹಿಸುವಂತಿಲ್ಲ. ಪ್ರಶಸ್ತಿ ಪಡೆದ ಮೂರು ವರ್ಷಗಳ ಬಳಿಕ ಬೇರೆ ವಿಭಾಗಕ್ಕೆ ಕೃತಿ ಸಲ್ಲಿಸಬಹುದಾಗಿದೆ ಎಂದು ವಿದ್ಯಾಚೇತನ ಪ್ರಕಾಶನದ ಸಂಚಾಲಕ ಹ.ಮ. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ “ಬಾಲ ಸಾಹಿತ್ಯ ಪುರಸ್ಕಾರ”ಕ್ಕೆ ಕೃತಿಗಳ ಆಹ್ವಾನ


