ಸಪ್ತಸಾಗರ ವಾರ್ತೆ,ವಿಜಯಪುರ, ಜು. 29:
ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಇದೀಗ ‘ಸೂಪರ್ ಮಾಮ್’ ವಿಶೇಷ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲಿದ್ದು, ಇದರ ಆಡಿಷನ್ಗಳು ಆಗಸ್ಟ್ 1ರಂದು ವಿಜಯಪುರದಲ್ಲಿ ನಡೆಯಲಿವೆ.
ಮನೆ, ಕುಟುಂಬ, ಉದ್ಯೋಗ ಹಾಗೂ ಮಕ್ಕಳ ಜವಾಬ್ದಾರಿಗಳ ನಡುವೆ ತಮ್ಮ ಪ್ರತಿಭೆಯನ್ನು ಮರೆಮಾಚಿಕೊಂಡಿರುವ ಅಮ್ಮಂದಿರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಆಡಿಷನ್ ಆಯೋಜಿಸಲಾಗಿದೆ. ನೃತ್ಯದ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಉತ್ತಮವಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರು ಆಡಿಷನ್ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದು.
ಆಡಿಷನ್ ಆಗಸ್ಟ್ 1 (ಶನಿವಾರ) ಬೆಳಿಗ್ಗೆ 9 ಗಂಟೆಯಿಂದ ಪ್ರಗತಿ ಪ್ರೈಮರಿ ಮತ್ತು ಹೈಸ್ಕೂಲ್, ರಾಜಾಜಿನಗರ, ಬಾಗಲಕೋಟೆ ರಸ್ತೆ, ವಿಜಯಪುರದಲ್ಲಿ ನಡೆಯಲಿದೆ.
ಭಾಗವಹಿಸುವವರು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ವಿಳಾಸ ದೃಢೀಕರಣದ ದಾಖಲೆ (ಜೆರಾಕ್ಸ್ ಪ್ರತಿ) ಕಡ್ಡಾಯವಾಗಿ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ವಿಶೇಷ ಸೂಚನೆ:
ಈ ಆಡಿಷನ್ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿಯು ಯಾವುದೇ ರೀತಿಯ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ. ಆಸಕ್ತ ಅಮ್ಮಂದಿರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆಡಿಷನ್ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.


