ಸಪ್ತಸಾಗರ ವಾರ್ತೆ,ವಿಜಯಪುರ, ಆ.5: ವಿಜಯಪುರ ಜಿಲ್ಲೆಯ ಉತ್ನಾಳ ಗ್ರಾಮದ ಬಸವರಾಜ ಬಾಗೇವಾಡಿ ಅವರಿಗೆ ಅಂತರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ–2026 ನೀಡಿ ಗೌರವಿಸಲಾಗಿದೆ.
ಆಗಸ್ಟ್ 1 ಮತ್ತು 2ರಂದು ಹೈದರಾಬಾದ್‌ನ ಚಂಪಾಪೇಟೆಯ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ 2ನೇ ಅಂತರಾಷ್ಟ್ರೀಯ ಕರಾಟೆ ಕ್ರೀಡಾಕೂಟದ ಅಂಗವಾಗಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಮಾರ್ಷಲ್ ಆರ್ಟ್ಸ್ ಶಿಕ್ಷಕರು, ತರಬೇತುದಾರರು ಹಾಗೂ ತೀರ್ಪುಗಾರರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಮಾರ್ಷಲ್ ಆರ್ಟ್ಸ್ ಹಾಗೂ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ, ಉತ್ನಾಳ ಗ್ರಾಮದ ಬಸವರಾಜ ನಂ. ಬಾಗೇವಾಡಿ ಅವರಿಗೆ ಆಯೋಜಕರಾದ ಮಡ್ಡಿ ಕನ್ನನಗೌಡ ಕನ್ನನಗೌಡ ಅವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ–2026 ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಶಿಕ್ಷಕರು, ತೀರ್ಪುಗಾರರು ಹಾಗೂ ಕ್ರೀಡಾ ಗಣ್ಯರು ಉಪಸ್ಥಿತರಿದ್ದು, ಬಸವರಾಜ ಬಾಗೇವಾಡಿ ಅವರ ಸಾಧನೆಯನ್ನು ಅಭಿನಂದಿಸಿದರು.
ಅಂತರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಬಸವರಾಜ ಬಾಗೇವಾಡಿ ಭಾಜನ


