ರಾಜ್ಯ ದತ್ತಿ ಪ್ರಶಸ್ತಿಗೆ ಮಮತೆಯ ಮರುಳಾರಾಧ್ಯರ ಶತವಚನಗಳ ಕೃತಿ ಆಯ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 12:
ಶ್ರೀ ಮಹಾಂತಪ್ಪ ಮ. ಹುಂಡೇಕಾರ ಹಾಗೂ ಸಾಲೋತ್ಯಪ್ಪ ಮ. ಹುಂಡೇಕಾರ ಸಹೋದರರು ಯುವ ಲೇಖಕರಿಗೆ ಕೊಡಮಾಡಿದ ರಾಜ್ಯಮಟ್ಟದ ಪ್ರಶಸ್ತಿಗೆ ಮಮತಾ ಗುಮಶೆಟ್ಟಿ (ಮುಳಸಾವಳಗಿ) ಅವರು ರಚಿಸಿರುವ ‘ಮಮತೆಯ ಮರುಳಾರಾಧ್ಯರ ಶತವಚನಗಳು’ ಕೃತಿ ಆಯ್ಕೆಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗೆ ಕೃತಿಯನ್ನು ಆಯ್ಕೆ ಮಾಡಲಾಗಿದ್ದು, ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಡಾ. ಮಾಧವ ಗುಡಿ, ಶಿಲ್ಪಾ ಭಸ್ಮೆ ಹಾಗೂ ಅಭಿಷೇಕ ಚಕ್ರವರ್ತಿ ಅವರನ್ನು ಒಳಗೊಂಡ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆ.16ರಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಸಾಹಿತ್ಯ ಕೃತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ರಾಜ್ಯದ ವಿವಿಧ ಭಾಗಗಳ ಕೃತಿಗಳನ್ನು ಆಯ್ಕೆ ಮಾಡಿ ಗೌರವಿಸುವ ಪರಂಪರೆಯನ್ನು ಹೊಂದಿದೆ.

Share this