ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಆಗಸ್ಟ್ ತಿಂಗಳ ವಿಶೇಷ ಕೊಡುಗೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.14 :
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯು ತನ್ನ ಮೊಬೈಲ್ ಹಾಗೂ ಫೈಬರ್ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ.
ಹೊಸ ಹಾಗೂ ಪೋರ್ಟ್-ಇನ್ ಆಗುವ ಮೊಬೈಲ್ ಗ್ರಾಹಕರಿಗೆ ಕೇವಲ ₹1ಕ್ಕೆ ‘ಫ್ರೀಡಂ ಪ್ಲಾನ್’ ಪರಿಚಯಿಸಲಾಗಿದೆ. ಈ ಯೋಜನೆಯಡಿ 24 ದಿನಗಳ ಅವಧಿಗೆ ಪ್ರತಿದಿನ 1 ಜಿಬಿ ಡೇಟಾ, ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ದೊರೆಯಲಿದೆ.
ಅದೇ ರೀತಿ, ₹51ರ ಸಾಮಾನ್ಯ ಪ್ಲಾನ್ನಲ್ಲಿ 28 ದಿನಗಳ ಅವಧಿಗೆ ಪ್ರತಿದಿನ 2 ಜಿಬಿ ಡೇಟಾ, ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ನೀಡಲಾಗುತ್ತದೆ.
ಫೈಬರ್ ಇಂಟರ್ನೆಟ್ ಸೇವೆಯಡಿ ಹೊಸ ಗ್ರಾಹಕರಿಗಾಗಿ ತಿಂಗಳಿಗೆ ₹1,111ರ ‘ಸೂಪರ್ ಪ್ಲಸ್ ಒಟಿಟಿ ಪ್ಲಾನ್’ ಘೋಷಿಸಲಾಗಿದೆ. ಈ ಯೋಜನೆಯಲ್ಲಿ 200 ಎಂಬಿಪಿಎಸ್ ವೇಗದ ಇಂಟರ್ನೆಟ್, 27 ಒಟಿಟಿ ಆ್ಯಪ್‌ಗಳು, ಡ್ಯುಯಲ್ ಬ್ಯಾಂಡ್ ವೈ-ಫೈ ಹಾಗೂ ಅನಿಯಮಿತ ಕರೆ ಸೌಲಭ್ಯ ಲಭ್ಯವಿರಲಿದೆ.
ಗ್ರಾಮೀಣ ಭಾಗದ ಗ್ರಾಹಕರಿಗಾಗಿ ತಿಂಗಳಿಗೆ ₹259ರ ‘ರೂರಲ್ ಎಂಟ್ರಿ ಪ್ಲಾನ್’ ಪರಿಚಯಿಸಲಾಗಿದ್ದು, 25 ಎಂಬಿಪಿಎಸ್ ವೇಗದ ಇಂಟರ್ನೆಟ್, ವೇವ್ಸ್ ಒಟಿಟಿ ಹಾಗೂ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಹೆಚ್ಚುವರಿಯಾಗಿ ₹199 ಪಾವತಿಸಿ ಸೋನಿ ಲೈವ್, ಜಿಯೋಹಾಟ್‌ಸ್ಟಾರ್ ಹಾಗೂ ಜೀ5 ಆ್ಯಪ್‌ಗಳನ್ನು ಪಡೆಯಬಹುದಾಗಿದೆ.
ಈ ಎಲ್ಲ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿವೆ. ಹೆಚ್ಚಿನ ಮಾಹಿತಿಗಾಗಿ ಬಿಎಸ್‌ಎನ್‌ಎಲ್‌ನ ಜೆಟಿಒ ಬಾಲಚಂದ್ರ ಬಾಲಾಜಿ ಅವರನ್ನು 9483510444 ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ಬಿಎಸ್‌ಎನ್‌ಎಲ್ ಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this