ನಂದಿ ಸಹಕಾರಿ ಪತ್ತಿನ ಸಂಘಕ್ಕೆ ₹76.63 ಲಕ್ಷ ಲಾಭ

ಕೃಷ್ಣನಗರದಲ್ಲಿ 17ನೇ ವಾರ್ಷಿಕ ಸರ್ವಸಾಧಾರಣ ಸಭೆ

ಸಪ್ತಸಾಗರ ವಾರ್ತೆ, ಕೃಷ್ಣನಗರ, ಸೆ. 16:
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸದಸ್ಯರ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹76.63 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶಶಿಕಾಂತಗೌಡ ಭೀಮನಗೌಡ ಪಾಟೀಲ (ಶಿರಬೂರ) ತಿಳಿಸಿದರು.
ನಗರದ ದಿವಂಗತ ಕೆ.ಎಚ್. ಪಾಟೀಲ ಸಭಾಭವನ (ರೈತ ಭವನ)ದಲ್ಲಿ ನಡೆದ ಸಂಘದ 17ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯರು, ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ಸಂಘವು 2025-26ನೇ ಸಾಲಿನಲ್ಲಿ ₹1,105.95 ಲಕ್ಷ ದುಡಿಯುವ ಬಂಡವಾಳ ಹಾಗೂ ₹557.46 ಲಕ್ಷ ಷೇರು ಬಂಡವಾಳ ಹೊಂದಿದ್ದು, ₹76.63 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ರಮೇಶ ಬಡ್ರಿ ಅವರು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಸಂಘದ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.
ನಿರ್ದೇಶಕರಾದ ತಿಮ್ಮಣ್ಣ ಅಮಲಝರಿ, ರಮೇಶ ಜಕರಡ್ಡಿ, ಗೌಡಪ್ಪ ಕೊನಪ್ಪನವರ, ವಿನೋದ ಮಾಚಕನೂರ, ರಾಜೇಂದ್ರ ಕೊರಡ್ಡಿ, ಲಚ್ಚಪ್ಪ ಕಜ್ಜಿಡೋಣಿ, ಮಲ್ಲಪ್ಪ ಗಿರಿವ್ವಗೋಳ, ವೆಂಕಣ್ಣ ಸಿಂಗರಡ್ಡಿ, ಅಶೋಕ ಯರಗಟ್ಟಿ, ಲಕ್ಷ್ಮೀಬಾಯಿ ದೊಡ್ಡಮನಿ, ರತ್ನವ್ವ ಬಿರಾದಾರ, ಹನುಮಂತ ಕೊಣ್ಣೂರ, ಮಹೇಶ ಯರಗಟ್ಟಿ ಸೇರಿದಂತೆ ಸಂಘದ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.
ರಮೇಶ ಜಕರಡ್ಡಿ ಸ್ವಾಗತಿಸಿದರು. ವಿನೋದ ಮಾಚಕನೂರ ವಂದಿಸಿದರು.

Share this