NIDJAM-2026: ವಿಜಯಪುರ ಜಿಲ್ಲಾ ಅಥ್ಲೆಟಿಕ್ಸ್ ತಂಡಕ್ಕೆ ಆಯ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 23:
20ನೇ ರಾಷ್ಟ್ರೀಯ ಅಂತರ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ (NIDJAM–2026)ಕ್ಕೆ ವಿಜಯಪುರ ಜಿಲ್ಲಾ ಅಥ್ಲೆಟಿಕ್ಸ್ ತಂಡದ ಆಯ್ಕೆ ಪ್ರಕ್ರಿಯೆ ಸೆ. 27ರಂದು ನಡೆಯಲಿದೆ.
ವಿಜಯಪುರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ (BDAA) ವತಿಯಿಂದ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ.
14 ಮತ್ತು 16 ವರ್ಷ ವಯೋಮಿತಿಯ ಬಾಲಕ–ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಕ್ರೀಡಾಪಟುಗಳು ನ.14ರಿಂದ 16ರವರೆಗೆ ತೆಲಂಗಾಣದ ಹೈದರಾಬಾದ್‌ನ ವಾಕ್ಸನ್ ವಿಶ್ವವಿದ್ಯಾಲಯ, ಕಾಮ್ಕೋಲೆ, ಸದಾಶಿವಪೇಟೆಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
UID ಪರಿಶೀಲನೆಗಾಗಿ ಕ್ರೀಡಾಪಟುಗಳು ಆಧಾರ್ ಕಾರ್ಡ್ ಅಥವಾ ಜನ್ಮ ದಿನಾಂಕದ ಪ್ರಮಾಣಪತ್ರದ ಮೂಲ ಪ್ರತಿ, ಮಾನ್ಯ ಇ-ಮೇಲ್ ಐಡಿ ಹಾಗೂ ಪಾಲಕರ ಮೊಬೈಲ್ ಸಂಖ್ಯೆಯನ್ನು ತರಬೇಕು. BDAA ವತಿಯಿಂದ ಆಸಕ್ತ ಕ್ರೀಡಾಪಟುಗಳಿಗೆ ವರ್ಷಪೂರ್ತಿ ಉಚಿತ ತರಬೇತಿ ಹಾಗೂ ಆಯ್ಕೆಯಾದವರಿಗೆ ನಿರಂತರ ಬೆಂಬಲ ನೀಡಲಾಗುವುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಬುಬಕರ್ ಎಚ್. ಸಾಗರ್ ಮೊ.7892208178, ಗೋಪಾಲ್ ಲಮಾಣಿ ಮೊ.8904633536 ಅಥವಾ ಮಲ್ಲೇಶ್ ಎಸ್. ಧನವಾಡೆ ಮೊ.8951541500 ಅವರನ್ನು ಸಂಪರ್ಕಿಸಬಹುದು ಎಂದು BDAA ಗೌರವ ಕಾರ್ಯದರ್ಶಿ ನವೀನ್ ಎಸ್. ಬಿದರಿ ತಿಳಿಸಿದ್ದಾರೆ.

Share this