ಸಪ್ತಸಾಗರ ವಾರ್ತೆ, ವಿಜಯಪುರ,ಜು. 13:
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತಗೊಂಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ರಾಜ್ಯದಲ್ಲಿ ಕಾಂಗ್ರೆಸ್ ಎಟಿಎಂ ಸರ್ಕಾರವಾಗಿದೆ. ಆದರೆ ಡೆಬಿಟ್ ಅಕೌಂಟ್ ನಲ್ಲಿ ಹಣವೇ ಇಲ್ಲ ಎಂದು ಛೇಡಿಸಿದರು.
ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹೊರಗುತ್ತಿಗೆ ಆಧಾರದ ಕೆಲಸಗಾರರಿಗೂ ಸಂಬಳವಿಲ್ಲ.
ತಮ್ಮರು ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ದಲಿತಪರ ಸರ್ಕಾರಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಇಲ್ಲ. ಎಲ್ಲವೂ ಗ್ಯಾರಂಟಿ ಯೋಜನೆಗಳಿಗೆ ಹಣ ಸೋರಿ ಹೋಗುತ್ತಿದೆ. ಗ್ಯಾರಂಟಿಯಿಂದ ನಮಗೆ ಮೋಸ ಆಗಿದೆ ಎಂದು ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದೊಂದಿಗೆ ಒಳ್ಳೆಯ ಸಂಬಂಧ ಕೂಡಾ ಇಟ್ಟುಕೊಂಡಿಲ್ಲ. ಇವರ ಆಡಳಿತದಿಂದ ನನಗೆ ತುಂಬಾ ನೋವಾಗುತ್ತದೆ. ನಮ್ಮ ಸರ್ಕಾರ ಮಾಡಿರುವ ಕೆಲಸಕ್ಕೆ ಇವರು ಭೂಮಿಪೂಜೆ ಮಾಡುವುದು, ಚಾಲನೆ ಕೊಡುವುದು ನಡೆದಿದೆ ಎಂದು ಲೇವಡಿ ಮಾಡಿದರು.
ಕಳೆದ ಎರಡು ವರ್ಷದಿಂದ ಅಭಿವೃದ್ಧಿ ಕೆಲಸ ಇಲ್ಲ. ಗ್ರಾಮೀಣ ರಸ್ತೆಗಳು ಒಂದೂ ಸರಿ ಇಲ್ಲ. ಗ್ರಾಮೀಣ ಜನರ ಕಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದರು.
ಮುಖ್ಯಮಂತ್ರಿಗಳ ಕಂಟ್ರೋಲ್ ನಲ್ಲಿ ಶಾಸಕರು, ಸಚಿವರು ಇಲ್ಲ.
ಸಿಎಂ ಮಾಡುವ ಕೆಲಸ ಸುರ್ಜೇವಾಲಾ ಅವರು ಬಂದು ಶಾಸಕ, ಸಚಿವರ ಜೊತೆಗೆ ಮಾತನಾಡುವಂತಹ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ ಎಂದರು.
ಹಿಂದೆ ನಿಜಲಿಂಗಪ್ಪ ನವರು, ರಾಮಕೃಷ್ಣ ಹೆಗಡೆ, ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾದರಿಯಾದ ಕೆಲಸ ಮಾಡಿದ್ದರು. ಆದರೆ ಈ ಸರ್ಕಾರದ ಕೆಲಸದಿಂದ ನನಗೆ ನೋವಾಗಿದೆ ಎಂದರು.
ಸಿದ್ದರಾಮಣ್ಣ ದೇವರಂತಹ ಮನುಷ್ಯ. ಆದರೆ ಈ ಕಾಂಗ್ರೆಸ್ ನವರ ಜೊತೆಗೆ ಸೇರಿ ಬರ್ಬಾದ್ ಆಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ: ಸಂಸದ ಜಿಗಜಿಣಗಿ ಆರೋಪ


