ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್‌ ಪ್ರಚಾರ

ವಿಜಯಪುರದ ವೃಕ್ಷಥಾನ್‌ಗೆ ಬೆಂಗಳೂರಿಗರಿಂದ ಉತ್ತಮ ಸ್ಪಂದನೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.26:
ಐತಿಹಾಸಿಕ ವಿಜಯಪುರ ನಗರದಲ್ಲಿ ಡಿಸೆಂಬರ್ 13ರಂದು ನಡೆಯಲಿರುವ 7ನೇ ಆವೃತ್ತಿಯ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರಿನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ (VCG) ಹಾಗೂ ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ವತಿಯಿಂದ ಪ್ರಚಾರ ಮತ್ತು ನೋಂದಣಿ ಜಾಗೃತಿ ಅಭಿಯಾನ ನಡೆಸಲಾಯಿತು.
ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್, ಕಬ್ಬನ್ ಪಾರ್ಕ್, ಶಾಂಕಿ ಟ್ಯಾಂಕ್ ಪ್ರದೇಶ ಹಾಗೂ ಆಡುಗೋಡಿ ಪೊಲೀಸ್ ಮೈದಾನಗಳಲ್ಲಿ ಅಭಿಯಾನ ನಡೆಸಿದ VCG ತಂಡ ಹಾಗೂ ವೃಕ್ಷಥಾನ್ ಸಮಿತಿ ಸದಸ್ಯರು ಸ್ಥಳೀಯರನ್ನು ಭೇಟಿ ಮಾಡಿ, ವಿಜಯಪುರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌ನ ಉದ್ದೇಶ, ವಿಶೇಷತೆ ಹಾಗೂ ನೋಂದಣಿ ಕುರಿತು ಮಾಹಿತಿ ನೀಡಿದರು.
ಐತಿಹಾಸಿಕ ಸ್ಮಾರಕಗಳ ನಗರ ವಿಜಯಪುರದಲ್ಲಿ ನಡೆಯುವ ಈ ವಿಶಿಷ್ಟ ಓಟದಲ್ಲಿ ಭಾಗವಹಿಸುವಂತೆ ಸಾರ್ವಜನಿಕರು ಹಾಗೂ ಓಟಗಾರರಿಗೆ ಮನವಿ ಮಾಡಲಾಯಿತು. ಅಭಿಯಾನಕ್ಕೆ ಬೆಂಗಳೂರಿನ ಸಾರ್ವಜನಿಕರು ಹಾಗೂ ಓಟಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಬೆಂಗಳೂರು ಭಾಗದಿಂದ ಈ ಬಾರಿ ಹೆಚ್ಚಿನ ಸಂಖ್ಯೆಯ ಓಟಗಾರರು ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವೃಕ್ಷಥಾನ್ ರನ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Share this