ಸಪ್ತಸಾಗರ ವಾರ್ತೆ,ವಿಜಯಪುರ, ಅ. 14:
ಶ್ರೀ ಬಿ.ಎಂ. ಪಾಟೀಲ ಮೆಮೊರಿಯಲ್ ಟ್ರೋಫಿ ವಿಜಯಪುರ ಪ್ರೀಮಿಯರ್ ಲೀಗ್ (ವಿಪಿಎಲ್) ಸೀಸನ್-2 ಕ್ರಿಕೆಟ್ ಪಂದ್ಯಾವಳಿ ಅ.18ರಿಂದ 25ರವರೆಗೆ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾವಳಿಯಲ್ಲಿ ಕರ್ನಾಟಕ ಕ್ರಿಕೆಟ್ ಕ್ಲಬ್, ಎಸ್ಎಚ್ಪಿ ವಾರಿಯರ್ಸ್, ಶಾರದಾ ಸ್ಟ್ರೈಕರ್ಸ್, ವಿಜಯಪುರ ಡಿಸ್ಟ್ರಿಕ್ಟ್ ಪೊಲೀಸ್, ಬಿಜಾಪುರ ಟೈಗರ್ಸ್, ಸುಗ್ರೀವ ವಾರಿಯರ್ಸ್, ಟೀಮ್ ಪ್ರಜ್ವಲ ಹಾಗೂ ಕವರ್ಡ್ರೈವ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಅ.18ರಂದು ಬೆಳಿಗ್ಗೆ 9ಕ್ಕೆ ಪಂದ್ಯಾವಳಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಚಾಲನೆ ನೀಡಲಿದ್ದಾರೆ. ಎಸ್ಪಿ ಲಕ್ಷ್ಮಣ ನಿಂಬರಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕೆಎಸ್ಸಿಎ ರಾಯಚೂರು ವಲಯ ಸಂಯೋಜಕ ಕುಶಾಲ ಪಾಟೀಲ ಗಡಗಿ, ಬಿ.ಎಲ್.ಡಿ.ಇ. ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್. ಕೋರಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪಂದ್ಯಾವಳಿಯ ಕುರಿತು ಸಹ-ಆಯೋಜಕ ಪ್ರಶಾಂತ ಹಜೇರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


