ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 15:
ಅಂಗನವಾಡಿ ಕಾರ್ಯಕರ್ತೆಯರನ್ನು ಬಿ ಎಲ್ಒ ಕೆಲಸದಿಂದ ಕೈ ಬಿಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನೂತನ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಪ್ರತಿ ನಿತ್ಯ ಎಫ್ ಆರ್ ಎನ್, ಮೊಬೈಲ್ ವೆರಿಪಾಯ್, ಆಧಾರ ವೆರಿಫಾಯ್, ಇಕೆವೈಸಿ, ಬಾಣಂತಿ ನೋಂದಣಿ, ಮಕ್ಕಳ ನೊಂದಣಿ, ನೆಟ್ ವರ್ಕ ಬರದೆ ಪೋಟೋ ಕ್ಯಾಪ್ಟರ್ ಮಾಡುವುದು ಕಷ್ಟವಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡರು .
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಭಾರತಿ ವಾಲಿ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಕೊಡಲು ಆಗುತ್ತಿಲ್ಲ. ಇದರ ಜೊತೆಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಕ್ಕಳ ಆಹಾರ ಕೊಡುವುದು ಸಹಾಯಕಿ ಇಲ್ಲದ ಕಾರಣ ಕಷ್ಟವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಮುಖಂಡ ಸುರೇಶ ಜೆ.ಬಿ. ಮಾತನಾಡಿ, ಸಿಂದಗಿ ಚಡಚಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ಒ ಕೆಲಸ ಮಾಡಲು ಆದೇಶ ಆಗಿರುವುದಿಲ್ಲ. ಆದರೆ ಇಂಡಿಯಲ್ಲಿ ಸಿಡಿಪಿಒ ಹಾಗೂ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಾಯ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆರ್ಡರ ತೆಗೆದುಕೊಳ್ಳಲು ಹೇಳಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಕಷ್ಟಕ್ಕೆ ತಂದು ಸಿಲುಕಿಸಿದ್ದಾರೆ. ನಿಮ್ಮ ಗೌರವಧನ ಕಡಿತ ಮಾಡುತ್ತೇನೆ ಎಂದು ಮೇಲಿಂದ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ, ದೌರ್ಜನ್ಯ ನಡೆಸುತ್ತಿದ್ದಾರೆ. ಕಾಯಿಲೆ ಇರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ಒ ಕೆಲಸಕ್ಕೆ ಹಾಕಿರುತ್ತಾರೆ. ಅಂಗವಿಕಲರಿಗೆ ಇತರೆ ಕಾಯಿಲೆ ಇದ್ದವರಿಗೆ ಬಿಎಲ್ಒ ಕೆಲಸಕ್ಕೆ ಹಾಕಿರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಸುರೇಖಾ ರಜಪೂತ ಹಾಗೂ ಅನಸೂಯಾ ಹಜೇರಿ ಮಾತನಾಡಿ, ಇಂಡಿಯಲ್ಲಿ ೧೭೫ ಅಂಗನವಾಡಿಯವರ ಕೈ ಕೆಳಗೆ ಕೆಲಸ ಮಾಡುವ ಸಹಾಯಕಿಯರು ಇರುವುದಿಲ್ಲ. ಅಂತವರಿಗೆ ಬಿಎಲ್ಒ ಹಾಕಿದರೆ ಅಂಗನವಾಡಿ ಮುಚ್ಚಿಕೊಂಡು ಬಿಎಲ್ಒ ಸರ್ವೆ ಮಾಡಬೇಕಾಗುತ್ತದೆ. ಆದ ಕಾರಣ ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡಲೇ ಬಿಎಲ್ಒ ಕೆಲಸದಿಂದ ಕೈ ಬಿಡಬೇಕು. ಇಂಡಿ ತಾಲೂಕಿನ ಎಲ್ಲಾ ಕಾರ್ಯಕರ್ತೆಯರಿಗೆ ಬಿಎಲ್ಓ ಕೆಲಸದಿಂದ ಮುಕ್ತಿ ಕೊಡಬೇಕೆಂದು ಸಿಡಿಪಿಒ ಅವರಿಗೆ, ತಹಶೀಲ್ದಾರರಿಗೆ ಮತ್ತು ಎಂಎಲ್ಎ ಅವರಿಗೆ, ಎಸಿ ಅವರಿಗೆ, ಡಿಸಿ ಅವರಿಗೆ ಮನವಿ ಕೊಟ್ಟಿರುತ್ತೇವೆ. ಆದರೂ ಇದಕ್ಕೆ ಸ್ಪಂದಿಸಿಲ್ಲ. ಕೂಡಲೇ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ನೂತನ ಜಿಲ್ಲಾಧಿಕಾರಿ ಡಾ. ಆನಂದ ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಸನ್ಮಾನಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಡಿಸಿಗೆ ಮನವಿ ಸಲ್ಲಿಕೆ
