ಸಪ್ತಸಾಗರ ವಾರ್ತೆ,ವಿಜಯಪುರ, ಜು. 16:
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜು..18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 9ಗಂಟೆಗೆ ಸಚಿವರ ಗೃಹ ಕಚೇರಿಯಲ್ಲಿ ದಿ ನ್ಯೂ ಯಾರ್ಕ್ ಟೈಮ್ಸ್ ವರದಿಗಾರರೊಂದಿಗೆ ಸಂದರ್ಶನ ನೀಡಲಿದ್ದಾರೆ.
ಮಧ್ಯಾಹ್ನ 12ಗಂಟೆಗೆ ಡಿಸಿಸಿ ಬ್ಯಾಂಕ್ ಹತ್ತಿರ ಆಲಕುಂಟೆ ನಗರದಲ್ಲಿ ಆಯೋಜಿಸಲಾದ ಉತ್ತರ ಕರ್ನಾಟಕ ಶಾಮಿಯಾನ ಸಂಘದ ವತಿಯಿಂದ 4ನೇ ಮಹಾ ಅಧಿವೇಶನ ಹಾಗೂ ಮಳಿಗೆಗಳ ಪ್ರದರ್ಶನ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.
ನಂತರ ಮಧ್ಯಾಹ್ನ 3ಗಂಟೆಗೆ ತಿಕೋಟಾ ಕೊರಬುಗಲ್ಲಿಯಲ್ಲಿ ಮಲಕನದೇವರಹಟ್ಟಿ ಇಟರಾಯನಗುಡಿ ಕೂಡು ರಸ್ತೆಯಿಂದ ಸಿದ್ದಾಪುರ ಕೆ- ತಿಕೋಟಾ ಕೂಡು ರಸ್ತೆ ವರೆಗೆ ಅಂದಾಜು ರೂ. 495 ಲಕ್ಷ ವೆಚ್ಚದಲ್ಲಿ 5.2ಕಿ.ಮೀ ವ್ಹಾಯಾ ಉತ್ತರ ಕಾಲುವೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ. ಹಾಗೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿ.ಸಿ-2 ರಿಂದ ಜಂಕ್ಷನ್ ವರೆಗೆ ವ್ಹಾಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿ ವರೆಗೆ ಅಂದಾಜು ರೂ.495 ಲಕ್ಷ ವೆಚ್ಚದಲ್ಲಿ 5 ಕಿ.ಮೀ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.
ಜು. 18ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರವಾಸ
