ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 20:
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪವಾಡಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ ಜು. 23 ಹಾಗೂ ಎರಡು ದಿನಗಳವರೆಗೆ ಜರುಗುವದು.
ಜು.23 ರ ರಾತ್ರಿ 8 ಗಂಟೆಗೆ ಕಗ್ಗೋಡ ತಿಪರಾಯ ದೇವರ, ಲಕ್ಷ್ಮೀ ದೇವಿಯ, ತಿಡಗುಂದಿ ಭೀರಪ್ಪ ದೇವರ ಫಲ್ಲಕ್ಕಿ ಆಗಮನವಾಗುವದು. ಚಿತ್ರ ವಿಚಿತ್ರ ಮದ್ದು ಸುಡುವದು. ಡೊಳ್ಳಿನ ಹಾಡಿಕೆ ಇರುವದು.
ಜು.24 ರಂದು ಬೆಳಗಿನ ಜಾವ 4 ಗಂಟೆಗೆ ನಾಗಠಾಣ ಭೀರದೇವರ, ಕಗ್ಗೋಡ ತಿಪರಾಯ ದೇವರ, ಲಕ್ಷ್ಮೀ ದೇವಿಯ, ತಿಡಗುಂದಿ ಭೀರಪ್ಪ ದೇವರ, ಗೂಳಪ್ಪ ಮುತ್ಯಾ ಅವರ ಫಲ್ಲಕ್ಕಿಗಳು ತಳೇವಾಡ, ಗೂಗದಡ್ಡಿ, ಸಾರವಾಡ, ದದಾಮಟ್ಟಿ, ಕಗ್ಗೋಡ ಗ್ರಾಮದ ಡೊಳ್ಳಿನ ವಾಲಗ, ಕರಡಿ ಮಜಲು, ಗೊಂಬೆ ಕುಣಿತದೊಂದಿಗೆ ಅಪಾರ ಭಕ್ತ ಸಮೂಹದೊಂದಿಗೆ ಮೆರವಣಿಗೆ ಮೂಲಕ ಹಾಲ ಹಳ್ಳಕ್ಕೆ ಹೋಗಿ, ಗಂಗೆ ಸೀತಾಳ ಮಾಡಿಕೊಂಡು ನಡು ಬಜಾರಕ್ಕೆ ಬರುವದು. ಅಲ್ಲಿ ಭಕ್ತರಿಗೆ ದರ್ಶನ ಕೊಟ್ಟು ದೇವಸ್ಥಾನಕ್ಕೆ ಬರುವದು. ಬೆಳಿಗ್ಗೆ 10 ಗಂಟೆಗೆ ಮಾಯಮ್ಮದೇವಿ ಹಬ್ಬ ಜರುಗುವದು.
ಮಧ್ಯಾನ್ಹ 12 ಕ್ಕೆ ಗುಂಡು ಮತ್ತು ಚೀಲ ಎತ್ತುವ ಸ್ಪರ್ಧೆ ದೇವಸ್ಥಾನದ ಆವರಣದಲ್ಲಿ ನಡೆಯುವದು. ರಾತ್ರಿ 10 ಕ್ಕೆ ಗೊರನಾಳ, ಅಫಜಲಪುರ ಗ್ರಾಮದ ಡೊಳ್ಳಿನ ಸಂಘದಿಂದ ಹಾಡಿಕೆ ಇರುವದು. ಜಾತ್ರೆಯಲ್ಲಿ ನಿರಂತರವಾಗಿ ಅನ್ನ ಪ್ರಸಾದ ಇರುವದು. ಈ ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುನೀತರಾಗಬೇಕೆಂದು ಜಾತ್ರಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪವಾಡಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ
