ಸಪ್ತಸಾಗರ ವಾರ್ತೆ, ವಿಜಯಪುರ, ಜು. 20:
ಕುಡಿತದ ವ್ಯಸನದಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಜನತೆಗೆ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಆಶ್ರಮ ಹತ್ತಿರ. ಕಾಳಿಕಾ ನಗರದ ಶ್ರೀ ಮೌನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ. 1953 ನೇ ಮದ್ಯವರ್ಜನ ಶಿಬಿರದ ಪ್ರಮುಖ ಉಪನ್ಯಾಸಕರಾಗಿ ಮಾತನಾಡಿದರು.
ಸಪ್ತವ್ಯಸನಗಳಲ್ಲಿ ಒಂದಾದ ಮದ್ಯಪಾನವು ಮಾನವ ಕುಲಕ್ಕೆ ಅಂಟಿದ ಬಹುದೊಡ್ಡ ಮಹಾಶಾಪ. ಮದ್ಯಪಾನ ವ್ಯಸನಕ್ಕೀಡಾದ ವ್ಯಕ್ತಿಯ ಆರೋಗ್ಯ, ಕುಟುಂಬ, ಆರ್ಥಿಕ, ಸಾಮಾಜಿಕ ಜೀವನದಲ್ಲಿ ವ್ಯತ್ಯಾಸವಾಗುವದಲ್ಲದೆ ಸಮಾಜ ಆತನನ್ನು ಆತನ ಕುಟುಂಬವನ್ನು ಕೀಳು ದೃಷ್ಟಿಯಿಂದ ನೋಡುತ್ತದೆ. ಮೋಜಿಗಾಗಿ, ಹವ್ಯಾಸಕ್ಕಾಗಿ, ನೋವು ಮರೆಯಲು, ಸಂತೋಷಕ್ಕಾಗಿ, ಮಾನಸಿಕ ನೆಮ್ಮದಿಗಾಗಿ ಕುಡಿಯುತ್ತೇವೆ ಎಂಬ ಕುಂಟುನೆಪಗಳನ್ನು ಮುಂದು ಮಾಡಿ ಕುಡಿಯುವ ಜನರು ಕೂಡಲೇ ಎಚ್ಚೆತ್ತುಕೊಂಡು ಕುಡಿತದ ವಿಷವರ್ತುಲದಿಂದ ಹೊರಬರಲು ತಿಳಿಸಿದರು.
ರಾಜ್ಯ ಅಸಂಘಟಿತ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಸ್ಥೆಯ ರಾಜ್ಯಾಧ್ಯಕ್ಷ ಪ್ರಕಾಶ ರಜಪೂತ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕುಡಿತವೆಂಬುದು ಫ್ಯಾಶನ್ ಆಗಿದ್ದು, ಕುಡಿಯಲಾರದ ಮತ್ತು ಯಾವುದೇ ವ್ಯಸನಗಳನ್ನು ಮಾಡದ ವ್ಯಕ್ತಿಯನ್ನು ಕೆಲವು ಜನರು ನೋಡುವ ದೃಷ್ಟಿಕೋನವೇ ಬದಲಾಗಿದೆ. ಒಂದು ಕಾಲದಲ್ಲಿ ಮದ್ಯಪಾನ, ಕುಡಿತ, ಅಪರಾಧ, ಅಪಚಾರ ಎಂಬ ಭಾವನೆ ಹೋಗಿ ಇಂದು ಯಾವುದೇ ಒಂದು ಕಾರ್ಯಕ್ರಮ ಕುಡಿತದಿಂದ ಪ್ರಾರಂಭವಾಗಿ ಕುಡಿತದಿಂದಲೆ ಕೊನೆಗೊಳ್ಳುತ್ತವೆ ಎಂದರು.
ಸರ್ಕಾರ ಕೂಡ ತನ್ನ ಬೊಕ್ಕಸವನ್ನು ತುಂಬಿಸುವ ಈ ಮದ್ಯಪಾನವನ್ನು ಸಾರ್ವಜನಿಕರ ಬದುಕು ಮೂರಾಬಟ್ಟೆಯಾಗುತ್ತಿದ್ದರು. ಮದ್ಯಪಾನ
ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಳ್ಳುತ್ತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮೂಹ ಮಾಧ್ಯಮಗಳು, ಸಂಘ ಸಂಸ್ಥೆಗಳು, ಸಮಾಜಸೇವಕರ ಪಾತ್ರ ಹಿರಿದಾಗಿದ್ದು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಿ ಲಕ್ಷಾಂತರ ಕುಟುಂಬಗಳ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಿವೃತ್ತ ಅಧಿಕಾರಿಗಳು ಕಾಳಿಕಾ ನಗರದ ಹಿರಿಯ ಸಮಾಜ ಸೇವಕ ಬಿ.ಸಿ. ಸಾರವಾಡ ಶಿಬಿರದ ಸಂಘಟಕ ದಿನೇಶ ಮರಾಠಿ ಬೆಳ್ತಂಗಡಿ ಸಾಂದರ್ಭಿಕವಾಗಿ ಮಾತನಾಡಿದರು.
ಗಣ್ಯ ಉದ್ಯಮಿ ಶಿವಾನಂದ ದೇಸಾಯಿ
ಅಧ್ಯಕ್ಷತೆ ವಹಿಸಿದ್ದರು. ಗಂಗಾ ದೊಡ್ದುರು, ಕಲ್ಲಪ್ಪ ಕದಂ ನಿರೂಪಿಸಿದರು. ಸಿ.ಜಿ.ಮಹೇಶ ವಂದಿಸಿದರು.
ಕುಡಿತದ ವ್ಯಸನದಿಂದ ಹೊರಬಂದು ಸಮಾಜದ ಮುಖ್ಯ ವಾಹಿನಿಗೆ ಬನ್ನಿ: ದಾನೇಶ ಅವಟಿ


