ನಾನು ಯಾವತ್ತೂ ಸಿಎಂ ಹುದ್ದೆ ಕ್ಲೇಮ್ ಮಾಡಿಯೇ ಇಲ್ಲ : ಸಚಿವ ಸತೀಶ ಜಾರಕಿಹೊಳಿ

ಸಪ್ತ ಸಾಗರ ವಾರ್ತೆ ವಿಜಯಪುರ, ಜು.22:
ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದರು.
ಸಿಎಂ ಈಗಾಗಲೇ ನಾನೇ 5 ವರ್ಷ ಇರ್ತಿನಿ ಎಂದಿದ್ದಾರೆ. ಸಿಎಂ ಜಾಗ ಖಾಲಿ ಇಲ್ಲ‌ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ.
ಅವರೇ ಹೊಂದಾಣಿಕೆ ಆಗಿದ್ದಾರೆ. ನಾವು ಹೇಳುವುದು ಏನು ಇಲ್ಲ ಎಂದು ತಿಳಿಸಿದರು.
ಸತೀಶ ಅಭಿಮಾನಿಗಳಿಂದ ಸಿಎಂ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಅವರು, ಅದೆಲ್ಲ ಏನಿಲ್ಲ. ನಾನು ಯಾವತ್ತೂ ಅದನ್ನು ಕ್ಲೈಮ್ ಮಾಡಿಯೇ ಇಲ್ಲ. ಅದರ ಬಗ್ಗೆ ನಾನು ಯಾವತ್ತೂ ಹೇಳಿಯೇ ಇಲ್ಲ.
ನಾನು ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗುತ್ತೇನೆ. ನಮ್ಮ ಡಿಪಾರ್ಟ್ಮೆಂಟ್ ಕೆಲಸದ ಮೇಲೆ ಹೋಗಲೇ ಬೇಕಾಗುತ್ತದೆ. ಅದಕ್ಕೆ ಹೋಗುತ್ತೇವೆ. ಅದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದು ಸಚಿವ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸಿಎಂ-ಡಿಸಿಎಂ ನಡುವೆ ಮುಸುಕಿನ ಗುದ್ದಾಟ ವಿಚಾರವಾಗಿ ಮಾತನಾಡಿ,
ಅದು ಮುಗಿದ ಹೋದ ವಿಚಾರ. ಈ ಬಗ್ಗೆ
ಸ್ವತಃ ಸಿಎಂ ಹೇಳಿದ್ದಾರಲ್ಲ. ಹಾಗಾಗಿ
ಮುಸುಕಿನ ಗುದ್ದಾಟ ಪ್ರಶ್ನೆಯೇ ಬರುವುದಿಲ್ಲ ಎಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಅದು ನಮ್ಮ ಹಂತದಲ್ಲಿ ಇಲ್ಲ.
ಹೈಕಮಾಂಡ್ ನಿರ್ಧಾರ ಮಾಡುತ್ತದೆ.
ಟೈಂ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡುತ್ತಾರೆ.
ಇದನ್ನು ನಾವು ಹೇಳಲಿಕ್ಕೆ ಆಗಲ್ಲ.
ಕಾದು ನೋಡೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
SIT ತನಿಖೆಯಲ್ಲಿ ಸೌಜನ್ಯ ಪ್ರಕರಣ ಪ್ರತ್ಯೇಕವಾಗಿಟ್ಟ ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. SIT ಮಾಡಿದ್ದಾರೆ. ತನಿಖೆ ಮಾಡಲಿ.
ಎರಡೂ ಪ್ರಕರಣ ನ್ಯಾಯಾಲಯಕ್ಕೆ ಹೋಗುತ್ತವೆ. ಅಂತಿಮ ತೀರ್ಪು ಬರಲಿ ನೋಡೋಣ. ಸರ್ಕಾರ ಸೂಕ್ತ ನಿರ್ಧಾರ ಮಾಡುತ್ತದೆ. ಎಲ್ಲರಿಗೂ ನ್ಯಾಯ ಸಿಗಲಿ ಎನ್ನುವ ದೃಷ್ಟಿಯಿಂದಲೇ ತೀರ್ಮಾನ ಮಾಡುತ್ತಾರೆ. ಕಾದು ನೋಡೋಣ ಎಂದು
ಹೇಳಿದರು.

Share