ಅನ್ನದಾತನ ಬದುಕು ಬದಲಿಸುವ ಬಜೆಟ್-ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಅನ್ನು ಸಚಿವ ಶಿವಾನಂದ ಪಾಟೀಲ ಸ್ವಾಗತಿಸಿದ್ದಾರೆ.
ಮಾರುಕಟ್ಟೆ ಸಂಪರ್ಕಗಳನ್ನು ಸಮರ್ಪಕವಾಗಿ ಬಲಪಡಿಸುವುದೂ ಸೇರಿ ರೂಪಿಸಲಾಗುವ ಸಮಗ್ರ ಕೃಷಿ ವಿಸ್ತಾರ ಯೋಜನೆ, ಎಐ ತಂತ್ರಜ್ಞಾನದಿಂದ ರೈತ ಕರೆ ಕೇಂದ್ರ ಉನ್ನತಿ, ಎಪಿಎಂಸಿಗಳ ಸಂಪೂರ್ಣ ಡಿಜಿಟಲೀಕರಣ ಯೋಜನೆಗಳು ಕೃಷಿಕರ ಬದುಕಿನ ಬದಲಾವಣೆಗೆ ಪೂರಕವಾಗಲಿವೆ. ಕಳಪೆ ಬಿತ್ತನೆ ಬೀಜ, ಕೀಟನಾಶಕ ಪೂರೈಕೆ ತಡೆ ಅತ್ಯಗತ್ಯವಾಗಿದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಮಟ್ಟದ ಸಲಹಾ ಸಮಿತಿ ರಚನೆ ಘೋಷಣೆ ಸ್ವಾಗತಾರ್ಹ ಎಂದು ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

Share this