ಕೇಸಾಪುರದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ: ರೈತರಿಗೆ ಆತಂಕ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.24:
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೇಸಾಪೂರ ಗ್ರಾಮದ ಜಮೀನಿನಲ್ಲಿ ಬೃಹತ್ ಗಾತ್ರದ ಮೊಸಳೆ ಜಮೀನಿನಲ್ಲಿ ಪತ್ತೆಯಾಗಿದೆ.
ಅಶೋಕ ಹಂಗರಗೊಂಡ ಎಂಬುವವರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು,
ರೈತರು ಭಯಭೀತರಾಗಿದ್ದಾರೆ.
ತೊಗರಿ ಬೆಳೆ ಮಧ್ಯೆ ಮೊಸಳೆ ಅವಿತುಕೊಂಡಿದೆ.
ಬೃಹತ್ ಗಾತ್ರದ ಈ ಮೊಸಳೆಯನ್ನು ರೈತರು ಹರ ಸಾಹಸ ಮಾಡಿ ಹಗ್ಗದಿಂದ ಕಟ್ಟಿ ಹಾಕಿ ಸೆರೆ ಹಿಡಿದಿದ್ದಾ.
ಅಶೋಕ ಹಗರಗೊಂಡ, ಮುದಕಪ್ಪ ಪೂಜಾರಿ, ಗದ್ದೆಪ್ಪ ಬೋಯಾರ, ಅಕ್ಬರ್ , ರಫೀಕ್ ಹಾಗೂ ಆಸೀಫ್ ತಾಳಿಕೋಟೆ ಎಂಬುವವರು ಸೇರಿಕೊಂಡು ಮೊಸಳೆ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ಕೃಷ್ಣಾ ನದಿ ನೀರಲ್ಲಿ ಬಿಟ್ಟಿದ್ದಾರೆ.
ನಮ್ಮ ಭಾಗದಲ್ಲಿ ಮೊಸಳೆಗಳ ಹೆಚ್ಚಾಗಿದೆ. ಮೊಸಳೆಗಳು ಗ್ರಾಮ, ಜಮೀನುಗಳ ಕಡೆಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

Share this