ಸಪ್ತಸಾಗರ ವಾರ್ತೆ, ವಿಜಯಪುರ, ಅ. 15:
ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಯುವಕನೋರ್ವ ಪ್ರೀತಿಸುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಾಳಿಂಗರಾಯ ದ್ಯಾಮಣ್ಣ ದಂಡೋಜಿ, ಶಿವನಗೌಡ ಚನ್ನಪ್ಪಗೌಡ ಬಿರಾದಾರ, ಜುಮ್ಮಣ್ಣ ದಳವಾಯಿ ಬಂಧಿತ ಆರೋಪಿಗಳು.
ಈ ಆರೋಪಿಗಳ ಪೈಕಿ ಮಾಳಿಂಗರಾಯ ದಂಡೋಜಿ ಈತ ಅಪ್ರಾಪ್ತೆಯನ್ನು ಪ್ರೀತಿಸಿ, ನನ್ನನ್ನೆ ಮದುವೆ ಆಗು ಎಂದು ಕೆಲ ದಿನಗಳಿಂದ ಪೀಡಿಸುತ್ತಿದ್ದ. ಈ ವಿಷಯ ಬಾಲಕಿ ತಂದೆ ತಾಯಿಗೆ ಗೊತ್ತಾಗಿದೆ. ಯುವಕ ಮಾಳಿಂಗರಾಯನಿಗೆ ಬಾಲಕಿ ತಂದೆ- ತಾಯಿ ಬುದ್ಧಿ ಹೇಳಿದ್ದರು. ಆದಾಗ್ಯೂ ಯುವಕನಿಂದ ಕಿರುಕುಳ ನೀಡುವುದು ತಪ್ಪಿದ್ದಿಲ್ಲ. ನಿನ್ನೆ ಮಂಗಳವಾರ ಬಾಲಕಿಯ ತಂದೆ- ತಾಯಿ ಬೇರೆ ಊರಿಗೆ ಹೋಗಿ ಬರುತ್ತಿದ್ದಂತೆಯೇ, ಸಂಜೆ ಮನೆಯಲ್ಲಿ ಬಾಲಕಿ ಇರಲಿಲ್ಲ. ತಂದೆ- ತಾಯಿಗಳಿಬ್ಬರು ತಮ್ಮ ಸಂಬಂಧಿಗಳ ಜೊತೆಗೆ ಬಾಲಕಿಯನ್ನು ಹುಡುಕಿದರೂ ರಾತ್ರಿ ವೇಳೆ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಬಾಲಕಿಯ ಮೃತದೇಹ ಗಿಡವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ, ಅಟ್ರಾಸಿಟಿ ಅಡಿ ಪ್ರಕರಣ ದಾಖಲಾಗಿದೆ.
Editor
Rudrappa B Asangi
Editor
Managing Editor
Chetan Asangi
Managing Editor


