ರಾಣಿ ಚನ್ನಮ್ಮ ಮೂರ್ತಿ ಅನಾವರಣಕ್ಕೆ ಜಿಲ್ಲಾಧಿಕಾರಿಗೆ ಮನವಿ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 8 : ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಕೂಡಲೆ ಅನಾವರಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ೩ ವರ್ಷಗಳಾದರೂ ಮೂರ್ತಿ ಅನಾವರಣಗೊಳ್ಳದಿರುವುದು ರಾಣಿ ಚನ್ನಮ್ಮಳ, ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ನೋವು ತಂದಿದೆ. ಆದ್ದರಿಂದ ಆದಷ್ಟು ಬೇಗನೆ ಮೂರ್ತಿಯನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಅನಾವರಣ ಮಾಡುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು ಎಂದು ಸಮಿತಿಯವರು ಆಗ್ರಹಿಸಿದ್ದಾರೆ.
ಚನ್ನಮ್ಮಳ ಮೂರ್ತಿಯ ಸುತ್ತಲೂ ತುಂಬಾ ಗಲೀಜಾಗಿದ್ದು, ನಾಯಿಗಳ ಆಶ್ರಯತಾಣವಾಗಿದೆ. ಇದು ರಾಷ್ಟ್ರ ನಾಯಕಿಗೆ ನಾವು ಮಾಡುತ್ತಿರುವ ಘೋರ ಅಪಮಾನ. ಇನ್ನು ಮುಂದೆ ಈ ವಿಳಂಬ ನೀತಿಯನ್ನು ಸಹಿಸುವುದು ಕಷ್ಟ ಸಾಧ್ಯ. ಅಭಿಮಾನಿಗಳ ಹಾಗೂ ಸಾರ್ವಜನಿಕರ ಸಹನೆ ಪರೀಕ್ಷಿಸಬಾರದು. ಈ ವಿಷಯವನ್ನು ರಾಜಕೀಯಕರಣಗೊಳಿಸದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗನೆ ಮೂರ್ತಿಯನ್ನು ಅನಾವರಣಗೊಳಿಸಲು ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಬಿ.ಪಾಟೀಲ, ಎಂ.ಎಸ್.ಪಾಟೀಲ ಕೋರಳ್ಳಿ, ನ್ಯಾಯವಾದಿ ದಾನೇಶ ಅವಟಿ, ಡಾ. ಆನಂದ ಜಿ. ಕುಲಕರ್ಣಿ, ಪರಿಸರವಾದಿ ಅಂಬಾದಾಸ ಜೋಶಿ, ನಾಗರಾಜ ಬಿರಾದಾರ, ಸಚಿನಗೌಡ ಪಾಟೀಲ ಕೋರವಾರ, ಬಸವರಾಜ ಜಾನರೆಡ್ಡಿ, ಗುರುಪಾದಪ್ಪ ಓಜಿ, ವಿಜಯಕುಮಾರ ಜಾಬಾ, ನ್ಯಾಯವಾದಿಗಳಾದ ಎಸ್.ಎಂ.ಪೊಲೀಸ್ ಪಾಟೀಲ, ಎಸ್.ಎಂ.ಪೊಲೀಸ್‌ಪಾಟೀಲ, ಸಿ.ಎಂ.ಗಬ್ಬೂರ, ಎಂ.ಎಸ್.ಬಗಲಿ, ಆರ್.ಎಂ.ಮಣೂರ, ಡಾ.ಶಶಿಕಾಂತ ಸಕ್ರಿ, ಸುರೇಶಗೌಡ ಪಾಟೀಲ, ಪಾರೀಶ ಶಿರಹಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this