ಪರಿಸರ ಸಂರಕ್ಷಿಸಲು ತಾಯಿ ಹೆಸರಿನಲ್ಲಿ ಒಂದು ಮರ ಎಂಬ ವಿಶಿಷ್ಟ ಅಭಿಯಾನ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 18: ಪರಿಸರ ರಕ್ಷಣೆ ಹಾಗೂ ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲು ವಿಶಿಷ್ಟ ಕಾರ್ಯಕ್ರಮವೊಂದನ್ನು ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೇರಾ ಯುವ ಭಾರತ ವಿಜಯಪುರ ಹಾಗೂ ಸಖಿ ಯುವ ಮಹಿಳಾ ಸೇವಾ ಸಂಸ್ಥೆ ಅಡಿಯಲ್ಲಿ ತಾಯಿ ಹೆಸರಿನಲ್ಲಿ ಒಂದು ಮರ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ನಡೆಸಲಾಯಿತು. ನಗರದ ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರವನ್ನು ರಕ್ಷಿಸಿ ಪೋಷಿಸುವ ಕುರಿತು ಜಾಗೃತಿ ಮೂಡಿಸಲಾಯಿತು.
ಶಾಲೆಯ ಹೆಡ್ ಮಾಸ್ಟರ್ ಶಿವರಾಮ ಜಮ್ಮನಕಟ್ಟಿ, ಪ್ರಲ್ಹಾದ ಹೂಗಾರ ಪರಿಸರವನ್ನು ಸಂರಕ್ಷಿಸಿದರೆ ಪರಿಸರ ನಮಗೆ ಏನೆಲ್ಲಾ ಕೊಡುತ್ತದೆ ಎನ್ನುವುದರ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಹಿಂದಿ ದಿವಸ್ ಆಚರಿಸಲಾಯಿತು. ಈ ವೇಳೆ ಹಿಂದಿ ಉಪನ್ಯಾಸಕಿ ಪ್ರತಿಭಾ ಸಾರವಾಡ ಹಿಂದಿ ಭಾಷೆಯ ಮಹತ್ವ ಹಾಗೂ ಪರಿಸರ ಮಹತ್ವ ವಿವರಿಸಿದರು.
ಶಾಲೆಯ ಆವರಣದಲ್ಲಿ ಸಸಿಯೊಂದನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿ ಹಾಗೂ ಸಂಸ್ಥೆಯ ಪೂಜಾ ಬಾಗಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share