ಸಪ್ತಸಾಗರ ವಾರ್ತೆ, ವಿಜಯಪುರ, ಆ. 4:
ಮಹಿಳೆ ಅಂದರೆ ಶಕ್ತಿ, ಸತ್ಯಯುಗದಿಂದ ಪ್ರಸ್ತುತ ಕಲಿಯುವವರೆಗೂ ಮಹಿಳೆಯರು ಸಮಾಜದ ಏಳ್ಗೆಯಲ್ಲಿ ತಮ್ಮ ಸಹಭಾಗಿತ್ವ ತೋರಿಸುತ್ತಾ ಬಂದಿದ್ದಾರೆ. ಸಮಾಜದ ಕಟ್ಟ ಕಡೆಯ ಮಹಿಳೆ ಕೂಡಾ ಧೈರ್ಯದಿಂದ ತಮ್ಮ ಜೀವನ ಬದುಕಲು ಬೇಕಾಗಿರುವ ಬೆಂಬಲ ನೀಡುವ ಧ್ಯೇಯದೊಂದಿಗೆ ಆಧ್ಯಾ ಟ್ರಸ್ಟ್ ಪ್ರಾರಂಭ ಮಾಡಿದ್ದೇವೆ ಎಂದು ಸಂಘದ ಅಧ್ಯಕ್ಷೆ ಪಲ್ಲವಿ ಜೋಶಿ (ಅಜರೇಕರ) ಅವರು ಹೇಳಿದರು.
ಮಹಿಳೆಯರು ಮನೆಯ ಕೆಲಸದ ಜೊತೆ ಸಮಾಜಮುಖಿ ಕೆಲಸದಲ್ಲಿಯೂ ಸಹ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಶೈಲಜಾ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿ, ಪಲ್ಲವಿ ಜೋಶಿ (ಮಾತಾಜಿ) ಅವರು ಮಹಿಳೆಯರ ಉನ್ನತಿಯ ಧ್ಯೇಯದೊಂದಿಗೆ ಕೆಲಸ ಪ್ರಾರಂಭಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಮಹಿಳೆಯರು ಕೂಡಾ ಸಂಘಟನೆ ಮಾಡಬಹುದು. ಯಾವುದೇ ಭೇದ ಭಾವ ಇಲ್ಲದೆ ಒಂದಾಗಿ ಸಮಾಜದ ಏಳ್ಗೆಗಾಗಿ ಶ್ರಮಿಸಬಹುದು ಎಂದು ವಿವರಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಸ್ವಪ್ನಾ ಕಣಮುಚನಾಳ ಮಾತನಾಡಿ, ಸ್ತ್ರೀ ಶಕ್ತಿ – ಸ್ತ್ರೀ ಸಬಲೀಕರಣ ಎಂದು ಭಾಷಣ ಮಾಡುವ ಸಾಕಷ್ಟು ಜನರನ್ನು ನೋಡಿದ್ದೇವೆ. ಆದರೆ ಮಾತಾಜಿ ಅವರು ಭಾಷಣ ಮಾಡದೆ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಪ್ರಾರಂಭಿಸಿದ ಆದ್ಯಾ ಟ್ರಸ್ಟ್ ಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಲಾ ಪಾಟೀಲ ಯತ್ನಾಳ್, ಡಾ. ಜಯಶ್ರೀ ಮುಂಡೆವಾಡಿ, ಸವಿತಾ ಜಾಲವಾದಿ, ನಿವೇದಿತಾ ಕುಲಕರ್ಣಿ, ರಾಧಿಕಾ ಗಲಗಲಿ, ಸೀಮಾ ದೇಸಾಯಿ ಹಾಗೂ ಪೂಜಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಮಹಿಳೆಯರ ಏಳ್ಗೆಗೆ ಆದ್ಯ ಟ್ರಸ್ಟ್ ಬದ್ಧ: ಪಲ್ಲವಿ ಜೋಶಿ
