ಶಿಸ್ತು, ಸಮರ್ಪಣೆಯಿಂದ ಸಾಧನೆ ಸಾಧ್ಯ-ಡಾ.ಶಿವಕುಮಾರ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 26 :
ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಸಮರ್ಪಣೆ ಮತ್ತು ನಾವೀನ್ಯತೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದು ಶ್ರೀಶರಣಬಸವೇಶ್ವರ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್. ಶಿವಕುಮಾರ ಕಿವಿಮಾತು ಹೇಳಿದರು.
ನಗರದ ಶ್ರೀ ಶರಣಬಸವೇಶ್ವರ ಫಾರ್ಮಸಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ವರ್ಷದ ಬಿ.ಫಾರ್ಮಸಿ ಮತ್ತು ಡಿ.ಫಾರ್ಮಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಶಿಕ್ಷಣ ಸಂಸ್ಥೆ ತಮ್ಮಲ್ಲಿ ಓದಲು ಬರುವ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಗತ್ಯ ಇರುವ ಸೌಲಭ್ಯ, ಸಂಪನ್ಮೂಲ ಕಲ್ಪಿಸಿ, ವಿದ್ಯಾರ್ಥಿಗಳ ಉನ್ನತಿಗೆ ಶ್ರಮಿಸುತ್ತದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ. ಪಾಟೀಲ, ಮುಖ್ಯ ಆಡಳಿತಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಡಾ. ಶಿರಾಜ ಅವಟಿ, ನಿವೃತ್ತ ಕರ್ನಲ್ ಫಿರೋಜ್ ಕರ್ಲೇಕರ ಮಾತನಾಡಿದರು.
ಎಸ್. ಎಸ್.ಬಿ. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ. ಈರಣ್ಣ ಶಿರಾಳಶೆಟ್ಟಿ, ಪಿಯು ಕಾಲೇಜಿನ ಪ್ರಾಚಾರ್ಯ ಪ್ರಜ್ವಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಓರಿಯಂಟೇಶನ್‌ ಕಾರ್ಯಕ್ರಮದಲ್ಲಿ ಪಠ್ಯಕ್ರಮ, ಪರೀಕ್ಷಾ ವ್ಯವಸ್ಥೆ, ಕಾಲೇಜು ಒದಗಿಸುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡಲಾಯಿತು.
ಅಲ್ಲದೇ ಪ್ರಯೋಗಶಾಲೆಗಳು, ಪಠ್ಯೇತರ ಚಟುವಟಿಕೆಗಳು, ಎನ್.ಎಸ್.ಎಸ್., ಉದ್ಯೋಗಾವಕಾಶ ತರಬೇತಿ ಹಾಗೂ ಸಂಶೋಧನಾ ಅವಕಾಶಗಳ ಕುರಿತು ವಿವರಿಸಲಾಯಿತು. ಬಳಿಕ ವಿದ್ಯಾರ್ಥಿಗಳು, ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಚಾಲಕ ಪ್ರಾಧ್ಯಾಪಕ ಸಂಜೀವ ಮಾಳಿ ನಿರ್ವಹಿಸಿದರು. ಡಾ.ಕಾಜಲ್ ಸುಮಯ್ಯ ನಿರೂಪಿಸಿದರೆ, ನಯನ ದೇಶೆಟ್ಟಿ ಸ್ವಾಗತಿಸಿದರು. ಸಿದ್ದರಾಮ ಬಾಗಲಕೋಟೆ ವಂದಿಸಿದರು.

Share