ಸಪ್ತಸಾಗರ ವಾರ್ತೆ, ವಿಜಯಪುರ, ನ.19: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಗುರುಗಳು ಡಾ. ಬಿ.ಎಂ. ಪಾಟೀಲ ಗುರೂಜಿಯವರ ನೇತೃತ್ವದಲ್ಲಿ ಉನ್ನತ ಧ್ಯಾನ ಶಿಬಿರವು ರಾಮನಗೌಡ ಪಾಟೀಲ (ಯತ್ನಾಳ್) ಗೋ ರಕ್ಷಾ ಕೇಂದ್ರ ಕಗ್ಗೋಡದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಡಾ. ಬಿ ಎಂ. ಪಾಟೀಲ ಗುರೂಜಿ ದಿವ್ಯ ಸಾನ್ನಿಧ್ಯ ವಹಿಸಿ, ಇಂದಿನ ಒತ್ತಡದ ಜೀವನದಲ್ಲಿ, ಪ್ರತಿಯೊಬ್ಬರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಲ್ಲರೂ ನೆಮ್ಮದಿಯಿಂದ ನಗು – ನಗುತ್ತಾ ಜೀವಿಸುವುದು. ಯೋಗದ ಜೊತೆಗೆ ಧ್ಯಾನ ಮುಖ್ಯ. ಧ್ಯಾನ ಎಂದರೆ, ನಮನ್ನು ನಾವು ಅರಿತುಕೋಳ್ಳುವುದು. ಯೋಗ, ಧ್ಯಾನ ಋಷಿ ಮುನಿಗಳ ಕಾಲದಿಂದಲೂ ಇದೆ. ಪ್ರಪಂಚಕ್ಕೆ ಯೋಗ ಧ್ಯಾನವು ಭಾರತದ ಕೊಡುಗೆಯಾಗಿದೆ. ಇದು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದರು.
ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗು ಸಜ್ಜನ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಅದಕ್ಕಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂತಹ ಶಿಬಿರ ನಡೆಸಲು ಅವಕಾಶ ನೀಡಿ, ಎಲ್ಲರೂ ಕೂಡ ವ್ಯಸನ ಮುಕ್ತರಾಗಿ, ಆರೋಗ್ಯವಂತರಾಗಿ ಬಾಳಬೇಕೆಂಬ ಕನಸು ನನಸಾಗಿಸುತ್ತಿದ್ದಾರೆ ಎಂದರು. ಸಮಾಜ ಸೇವಕ ಮಂಜುನಾಥ ವಂದಾಲ ಮಾತನಾಡಿ, ಧ್ಯಾನ ಶಿಬಿರಗಳು ಆರೋಗ್ಯವನ್ನು ಸುಧಾರಿಸುವ ಜೊತೆಗೆ ಆತ್ಮಸ್ಥೈರ್ಯ, ಧೈರ್ಯ ತುಂಬುತ್ತವೆ. ಆದ್ದರಿಂದ ಪ್ರತಿ ಕ್ಷಣ ಆರೋಗ್ಯವಂತರಾಗಿ, ಕ್ರಿಯಾಶೀಲರಾಗಿರಲು ಸಾಧ್ಯ. ಇದಕ್ಕಾಗಿ ಪ್ರತಿಯೊಬ್ಬರೂ ಇಂತಹ ಶಿಬಿರದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಯೋಗದಿಂದ ಯೋಗ್ಯತೆ ಹೆಚ್ಚುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ಯೋಗ, ಧ್ಯಾನ ಮಾಡಿ ಆರೋಗ್ಯವಂತರಾಗಿರಿ. ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಆರ್ಟ್ ಆಫ್ ಲಿವಿಂಗ್ ನ ಸಹನಾ ಪಾಟೀಲ್ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು.
ವಿಜಯಪುರ ಸಿದ್ದೇಶ್ವರ ಸಂಸ್ಥೆಯ ಸಂಗು ಸಜ್ಜನ, ಮಹಾದೇವಯ್ಯ ಗಚ್ಚಿನಮಠ, ಮಂಜುನಾಥ, ವಂದಾಲ ಹಾಗೂ ಎಂ.ವೈ ಪಾಟೀಲ್ ಆಗಮಿಸಿದ್ದರು.
ಚಂದ್ರಶೇಖರ ಸಿಂಧೂರ್ ನಿರೂಪಣೆ ಮಾಡಿದರು. ಶಿಕ್ಷಕಿ ಸಹನಾ ಪಾಟೀಲ್ ವಂದಿಸಿದರು.
ಶಿಬಿರರ್ಥಿಗಳಾದ ಪ್ರಕಾಶ್ ಚವ್ಹಾಣ, ಪ್ರಕಾಶ ಗುಳ್ಳೆದಗುಡ್ಡ, ಪ್ರವೀಣ ಮಾಗಿಶೆಟ್ಟರ್, ಸುಭಾಷ್ ಚವ್ಹಾಣ, ಪ್ರಕಾಶ್ ನಾಯಕ, ಮಹಾದೇವಿ, ಬಿರಾದಾರ, ಅಕ್ಕಮಹಾದೇವಿ ಧರಿ, ಸುಜಾತಾ ಮಣ್ಣೂರ,
ಸ್ವ -ಅನುಭವನ್ನು ಹಚ್ಚಿಕೊಂಡರು. ಲೋಕೇಶ್ ಪಾಟೀಲ, ಅನಿತ ಪಾಟೀಲ, ಶೋಭಾ ಪಾಟೀಲ, ಶೃತಿ ಪಾಟೀಲ, ಮಯೂರ್ ಮಿಣಜಿಗಿ,
ಆರ್ .ಬಸವರಾಜ್, ಎನ್. ಡಿ ಮಸೂತಿ, ಮಾಳಪ್ಪ ಹಾಲಕ್ಕನವರ,
ಅಶೋಕ ಬಾಬರ, ಚಂದ್ರಶೇಖರ ಹಿರೇಮಠ, ಅರವಿಂದ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ 80ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಗ್ಗೋಡದಲ್ಲಿ ಉನ್ನತ ಧ್ಯಾನ ಶಿಬಿರ


