ಸಪ್ತಸಾಗರ ವಾರ್ತೆ, ಬೆಂಗಳೂರು, ಫೆ. 9 : ರಾಜ್ಯ ವಕೀಲರ ಪರಿಷತ್ತಿಗೆ ಸ್ಪರ್ಧಿಸುತ್ತಿರುವ ನಾನು ಗೆದ್ದರೆ ಕರ್ನಾಟಕ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಹೋರಾಟ ಮಾಡುವ ಸದಿಚ್ಚೆ ತಮಗಿದೆ ಎಂದು ಪ್ರಖ್ಯಾತ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು. ಬೆಂಗಳೂರಿನ ಕೆ ಎಸ್ ಬಿ ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರ ಬಂದು ತಮ್ಮ ಬೆಂಬಲಿಗರನ್ನುದ್ದೇಶಿ ಮಾತನಾಡಿದ ಅವರು, ವಕೀಲರ ಹಿತ ಕಾಪಾಡುವುದು ಪರಿಷತ್ತಿನ ಮಹತ್ವದ ಉದ್ದೇಶವಾಗಿದೆ. ಅದಕ್ಕಾಗಿ ವಕೀಲರ ಕಲ್ಯಾಣಕ್ಕಾಗಿ ವಿವಿಧ ಕ್ರಿಯಾತ್ಮಕ ಯೋಜನೆ ಯೋಚನೆ ಮಾಡಿ ಅವುಗಳ ಜಾರಿಗೆ ಶ್ರಮಿಸುವುದಾಗಿ ತಿಳಿಸಿದರು.
ವಕೀಲರ ಪರಿಷತ್ತಿನ ಸಂರಕ್ಷಣೆ ಮಾಡುವ ಜವಾಬ್ದಾರಿ ಮತದಾರ ವಕೀಲರ ಕೈಯಲ್ಲಿದೆ. ಕೆ ಎಸ್ ಬಿ ಸಿ ಭವಿಷ್ಯ ಮತದಾರರಲ್ಲಿ ಅಡಗಿದೆ. ಈ ಬಾರಿ ಹೊಸ ಪ್ರತಿಭೆಗಳಿಗೆ, ಹೆಚ್ಚಾಗಿ ಆಯ್ಕೆ ಮಾಡಬೇಕಾಗಿದೆ ಎಂದ ಅವರು ಹೇಳಿದರು.
ಪ್ರತಿ ಜಿಲ್ಲೆ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಜ್ಯೂನಿಯರ್ಸ ವಕೀಲರಿಗಾಗಿ ಹಾಸ್ಟೇಲ್ ಹಾಗೂ ರಾಜ್ಯದಾನಿಯಲ್ಲಿ ವಕೀಲರ ಭವನ ನಿರ್ಮಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ವಕೀಲರ ಕಲ್ಯಾಣಕ್ಕಾಗಿ ಸೌಲಭ್ಯಗಳಿಗಾಗಿ ವಿವಿಧ ರೀತಿಯ ವಿನೂತನ ಹೋರಾಟ ಮಾಡುವುದಾಗಿ ನುಡಿದರು.
ಹಿರಿಯ ವಕೀಲರಾದ ಪ್ರಭಾಕರ ಕೆ. ಅವರು ಮಾತನಾಡಿ, ಹುಟ್ಟು ಹೋರಾಟಗಾರ ಭೃಂಗಿಮಠ ಅವರ ಹೋರಾಟ ಜೀವನದ ಅನುಭವ ಮತ್ತು ಅವರ ಸೇವೆ ಪರಿಷತ್ತಿಗೆ ಅಗತ್ಯವು ಇದೆ ಎಂದರು.
ಪರಿಷತ್ತಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ವಕೀಲರು ಮಲ್ಲಿಕಾರ್ಜುನ ಭೃಂಗಿಮಠ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
ಹೋರಾಟಗಾರ ಈಗ ಬಾರ್ ಕೌನ್ಸಿಲ್ ಚುನಾವಣೆಗೆ ಸ್ಪರ್ಧಿಸಿದ್ದು ಸ್ವಾಗತಕರ ಸಂಗತಿ ಎಂದರು.
ಶರಣುಬಸವೇಶ್ವರ ಪುರಾಣಿಕ ಮಠ, ಪ್ರಭಾಕರ ಮುತ್ತಲಗಡ್ಡಿ, ಮಹೇಶ ಮೂಕೆ, ಎನ್.ಎಸ್. ಪಾಟೀಲ, ಸಿದ್ದು ಬಿರಾದಾರ, ಅಲ್ತಾಫ ಮಿರ್ದೆ, ವಿ.ಎಸ್. ಪಾಟೀಲ, ರಾಜು ಹಿರೇಮಠ, ದಾನಯ್ಯ ಸ್ವಾಮಿ ಮುಂತಾದವರು ಇದ್ದರು.
ಕಲಬುರಗಿ ಹೈಕೋರ್ಟ್ ಚಳವಳಿಯಲ್ಲಿ ಭೃಂಗಿಮಠರ ಪಾತ್ರ ಸಹ ಇಲ್ಲಿ ನೆನಪಿಸಬಹುದು ಎಂದರು.
ರಾಜ್ಯ ಬಾರ್ ಕೌನ್ಸಿಲ್ ಚುನಾವಣೆಗೆ ವಕೀಲ ಭೃಂಗಿಮಠ ನಾಮಪತ್ರ ಸಲ್ಲಿಕೆ


