ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನ

ಸಪ್ತಸಾಗರ ವಾರ್ತೆ,ವಿಜಯಪುರ,ಡಿ.೬: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರವರ, ೬೯ನೇ ಮಹಾಪರಿನಿರ್ವಾಣ ದಿನವನ್ನು ಶನಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲಹಮೀದ ಮುಶ್ರೀಫ್ ಅವರು ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ಪ್ರಮುಖ ನಾಯಕರಾಗಿದ್ದರು. ಅವರು ನ್ಯಾಯಶಾಸ್ತ್ರಜ್ಞ ಅರ್ಥಶಾಸ್ತ್ರಜ್ಞ, ಸಾಮಾಜಿಕ ಸುಧಾರಕ ರಾಜಕಾರಣಿಯಾಗಿದ್ದರು. ಭಾರತ ಸಂವಿಧಾನವನ್ನು ರಚಿಸಿದ ಸಮಿತಿಯ ಅಧ್ಯಕ್ಷರಾಗಿ ಡಾ. ಅಂಬೇಡ್ಕರರವರು ಎಲ್ಲ ದೇಶದ ನಾಗರಿಕರಿಗೆ ನ್ಯಾಯ, ಸಮಾನತೆ ಮತ್ತು ಘನತೆಯನ್ನು ತರುವಲ್ಲಿ ನಿರಂತರವಾಗಿ ಶ್ರಮಿಸಿದರು. ಸಂವಿಧಾನ ಸಭೆಗೆ ಅವರ ಕೊಡುಗೆಗಳು ಪ್ರಜಾಪ್ರಭುತ್ವದ ಮತ್ತು ಎಲ್ಲರನ್ನು ಒಳಗೊಂಡು ಅಡಿಪಾಯ ಹಾಕಿದರು. ಜವಾಹಾರಲಾಲ ನೆಹರು ಅವರ ಸಂಪುಟದಲ್ಲಿ ಡಾ. ಅಂಬೇಡ್ಕರವರು ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಅವರು ನಿರ್ಣಾಯಕ ಕಾನೂನು ಸುಧಾರಣೆಗಳಲ್ಲಿ ಕೆಲಸ ಮಾಡಿದ್ದರು ಎಂದು ಹೇಳಿದರು.
ನಂತರ ಪರಿಶಿಷ್ಟ ಜಾತಿ ವಿಭಾಗದ ರಮೇಶ ಗಬ್ಬೇವಾಡ ಅವರು ಮಾತನಾಡಿ, ಡಾ. ಅಂಬೇಡ್ಕರರವರು ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ಅಸಮಾನತೆಗಳನ್ನು ತಿರಸ್ಕರಿಸಿದರು. ಸಾಮಾಜಿಕ ಸಮಾನತೆ ಮತ್ತು ಘನತೆಗಾಗಿ ಹೋರಾಡಲು ಲಕ್ಷಾಂತರ ಜನರನ್ನು ಪ್ರೇರೆಪಿಸಿದರು. ಮಹಾಪರಿನಿರ್ವಾಣ ದಿವಸವನ್ನು ಗೌರವಿಸುವ ಮತ್ತು ನ್ಯಾಯಯುತ ಸಮಾಜದ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಕೆಲಸವಾಗಿದೆ ಎಂದು ಹೇಳಿದರು.
ಡಾ. ಅಂಬೇಡ್ಕರವರು ಜೀವನದಲ್ಲಿ ಬೌಧ್ದ ಧರ್ಮವನ್ನು ಸ್ವೀಕರಿಸಿದರು ಎಂದು ಹೇಳಿದರು.
ವೈಜನಾಥ ಕರ್ಪೂರಮಠ ಮಾತನಾಡಿ, ಡಾ. ಅಂಬೇಡ್ಕರವರು ಭಾರತ ಸಂವಿಧಾನವನ್ನು ರಚಿಸಿದರು. ಡಾ. ಅಂಬೇಡ್ಕರರವರು ಎಲ್ಲ ದೇಶದ ನಾಗರಿಕರಿಗೆ ನ್ಯಾನ ಸಮಾನತೆ ಮತ್ತು ಘನತೆಯನ್ನು ತರುವಲ್ಲಿ ಶ್ರಮಿಸಿದರು. ಸಂವಿಧಾನ ರಚಿಸುವಲ್ಲಿ ಅವರ ಕೊಡುಗೆ ಅಪಾರವಾಗಿವೆ. ಜವಾಹರಲಾಲ ನೆಹರು ಅವರ ಸಂಪುಟದಲ್ಲಿ ಡಾ. ಅಂಬೇಡ್ಕರವರು ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಜಿಲ್ಲಾ ಖಜಾಂಚಿ ವಿಜಯಕುಮಾರ ಘಾಟಗೆ, ಜಲನಗರ ಬ್ಲಾಕ್ಲ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದಶಿಗಳಾದ ವಸಂತ ಹೊನಮೊಡೆ, ಶರಣಪ್ಪ ಯಕ್ಕುಂಡಿ, ಹಾಜಿಲಾಲ ದಳವಾಯಿ, ಅಬ್ದುಲ್ ಪೀರಾ ಜಮಖಂಡಿ, ಆನಂದ ಜಾಧವ, ಮಹಿಬೂಬ ಕಲಾದಗಿ, ಹಸನ ಮುಲ್ಲಾ, ಪರಶುರಾಮ ಹೊಸಮನಿ, ಹುಸೇನ ತಾಜೂದ್ದೀನ ವಾಲಿಕಾರ, ಎಂ.ಎ. ಬಕ್ಷಿ, ಭಾರತಿ ಹಡಪದ, ಈರಪ್ಪ ಕುಂಬಾರ, ಕಲ್ಲಪ್ಪ ಪಡಶೆಟ್ಟಿ, ಏಜಾಜ ಮುಖಬಿಲ್, ಸಾಜೀದಹುಸೇನ ರಿಸಾಲದಾರ, ವೀರೇಶ ಕಲಾಲ, ಪ್ರದೀಪ, ಗುಲಾಬ ಚವ್ಹಾಣ, ರಮೇಶ ಲಮಾಣಿ, ಲಕ್ಷ್ಮಣ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.

Share this