ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಒದಗಿಸಿ:ಶಾಸಕರಿಗೆ ಮನವಿ

ಸಪ್ತಸಾಗರ ವಾರ್ತೆ,ಇಂಡಿ, ಫೆ. 10: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳಿಗಾಗಿ ಸ್ವಂತ ಪತ್ರಿಕಾ ಭವನದ ಕಟ್ಟಡ, ನಿವೇಶನ ಒದಗಿಸಲು ಸಂಘದ ಪದಾಧಿಕಾರಿಗಳು ಇಂಡಿ ಶಾಸಕ ಯಶವಂತರಾಯಗಿಡ ಪಾಟೀಲ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳು ಇಂಡಿ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.
ಸಂಘದ ಕಾರ್ಯ ಚಟುವಟಿಕೆಗಾಗಿ ತ್ವರಿತವಾಗಿ ಪತ್ರಿಕಾ ಭವನದ ಕಟ್ಟಡಕ್ಕಾಗಿ ನಿವೇಶನ ಮಂಜೂರು ಮಾಡಿಸಿಕೊಡಬೇಕು ಎಂದು ಇಂಡಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರ ಹಾಗೂ ಪ್ರಧಾನಕಾರ್ಯದರ್ಶಿಗಳ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಶಾಸಕರು ಪ್ರತಿಕ್ರಿಯಿಸಿ ಈ ಕುರಿತು ಪರಿಶೀಲನೆ ಮಾಡಿ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇಂಡಿ ತಾಲೂಕಾ ಕಾನಿಪ ಅಧ್ಯಕ್ಷ ಅಬುಶಾಮಾ ಹವಾಲ್ದಾರ, ಕಾನಿಪ ಪ್ರಧಾನಕಾರ್ಯರ್ಶಿ ರಾಜಕುಮಾರ ಚಾಬುಕಸವಾರ, ಕಾನಿಪ ಜಿಲ್ಲಾ ಕಾರ್ಯದರ್ಶಿ ಸದ್ದಾಮಹುಸೇನ ಜಮಾದಾರ, ಕಾನಿಪ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ, ಜಹಾಂಗಿರ ದೇಸಾಯಿ, ಹಸನ ಮುಜಾವರ, ಪ್ರವೀಣ ಮಠ, ಇರಶಾದ ಬೋರಾಮಣಿ ಸೇರಿದಂತೆ ಅನೇಕರು ಇದ್ದರು.

Share this