ಅಪಾಯಕರ ಮನರಂಜನೆ ಕ್ರೀಡೆಗಳಿಗೆ ಕಡಿವಾಣ ಹಾಕಲು ಡಿಸಿಗೆ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 1:
ಅಪಾಯಕಾರಿ ಮನರಂಜನೆ ಆಟಗಳಿಗೆ ನಗರದ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಪರವಾನಗಿ ನೀಡದಂತೆ ಭೀಮ್ ಸರ್ಕಾರ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಮಾಡಿಕೊಂಡಿದೆ.
ನಗರದ ಕಳೆದ ವರ್ಷದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನಧಿಕೃತ ಅಪಾಯಕರ ಕಾನೂನು ಬಾಹಿರ ಮನೋರಂಜನಾ ಆಟಗಳಿಗೆ ಪರವಾನಿಗೆ ನೀಡಿದ್ದಿರಿ. ಆ ಪ್ರಯುಕ್ತ ಉಲ್ಲೇಖ (೨) ರ ಪ್ರಕಾರ ನಮ್ಮ ಸಂಘಟನೆ ಪರವಾಗಿ ನ್ಯಾಯಾಲಯದ ಮೆಟ್ಟಲೇರಿದ್ದ ತಮಗೂ ತಿಳಿದ ವಿಷಯ. ಅದರಂತೆ ಈ ಮನೋರಂಜನಾ ಆಟಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಅರ್ಜಿ ಬರೆದು ಎನ್.ಓ.ಸಿ ನೀಡದಿರುವ ಬಗ್ಗೆ ಪತ್ರ ಪಡೆದುಕೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರೂ ಕೂಡಾ ಪರವಾನಿಗೆ ಇಲ್ಲದೆ ಮನೋರಂಜನೆ ಆಟಗಳನ್ನು ಆಡಿಸಲಾಯಿತು. ಈಗ ಮತ್ತೆ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಮೀಪಿಸಿದ್ದು ಮತ್ತೆ ಈ ಅಪಾಯಕರ ಕಾನೂನು ಬಾಹಿರ ಮನೋರಂಜನಾ ಆಟಗಳನ್ನು ಹಾಕಲು ಸಿದ್ದತೆ ನಡೆದಿರುವುದು ಕಂಡು ಬಂದಿದೆ. ತಾವೂ ಸೂಕ್ತ ಕ್ರಮ ಕೈಗೊಂಡು ಈ ಅಪಾಯಕರ ಮನೋರಂಜನಾ ಆಟಗಳಿಗೆ ಪರವಾನಿಗೆ ನೀಡದೆ ಆರಂಭಿಸಿದಲ್ಲಿ ತಾವೇ ಹೊಣೆಗಾರರಾಗಬೇಕಾಗುತ್ತದೆ. ಒಂದೊಮ್ಮೆ ಅಪಾಯಕಾರಿ ಮನರಂಜನೆ ಆಟಗಳಿಗೆ ಪರವಾನಿಗೆ ನೀಡಿದರೆ ಉಗ್ರ ಹೋರಾಟವಲ್ಲದೆ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಕ್ರಮಕ್ಕೆಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಭೀಮ್ ಸರಕಾರ ಸಂಘಟನೆ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮ್ ಸರಕಾರ ಸಂಘಟನಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ, ನಗರ ಅಧ್ಯಕ್ಷ ಸೋಮಶೇಖರ ಶಹಾಪುರ, ಜಿಲ್ಲಾ ಕಾರ್ಯದರ್ಶಿ ಅನೀಲ ಬೋರಗಿ, ಶಂಕರ ಬಜಂತ್ರಿ, ಸುನೀಲ ಬೋರಗಿ, ಸುನೀಲ ಚಲವಾದಿ ಸೇರಿದಂತೆ ಅನೇಕರು ಇದ್ದರು.

Share this