ಮಹಿಳೆ ಪತ್ತೆಗೆ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ.28: ಜಿಲ್ಲೆಯ ಆಲಮಟ್ಟಿ ನಿವಾಸಿ ಹಾಲಿ ವಿಜಯಪುರದ ಜೈ ಕರ್ನಾಟಕ ಕಾಲನಿ ನಿವಾಸಿಯಾದ 26 ವರ್ಷದ ಅಕ್ಷತಾ ಚನ್ನಪ್ಪ ಗುಡದಿನ್ನಿ ಎಂಬ ಮಹಿಳೆ ಸೆ.15 ರಿಂದ ಕಾಣೆಯಾಗಿರುವ ಕುರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಕಾಣೆಯಾಗಿರುವ ಮಹಿಳೆ ಪತ್ತೆಗಾಗಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ಮಹಿಳೆಯು ಗೋಧಿಗೆಂಪು ಮೈ ಬಣ್ಣ, ಅಂದಾಜು 5.4 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ನೆಟ್ಟನೆಯ ಮೂಗು ಹೊಂದಿದ್ದಾಳೆ.
ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವಳಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಬೂದು ಬಣ್ಣದ ಟಾಫ್ ಚೂಡಿದಾರ ಹಾಗೂ ಬಿಳಿ ಬಣ್ಣದ ಲೆಗ್ ಜೀನ್ಸ್ ಧರಿಸಿದ್ದಳು. ಈ ಚಹರೆಪಟ್ಟಿಯುಳ್ಳ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಗೋಲಗುಂಬಜ್ ಪೊಲೀಸ್ ಠಾಣೆ ಅಥವಾ ದೂ: 08352-250214, ಸಿಪಿಐ ಕಚೇರಿ ದೂ: 08352-250252, ಡಿಪಿಓ ದೂ: 08352-253100, ಎಸ್‍ಪಿ ಕಚೇರಿ ದೂ: 08352-250152 ಸಂಖ್ಯೆಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರಿದ್ದಾರೆ.

Share this