ಗ್ರಾಮ‌ಒನ್ ಫ್ರಾಂಚೈಸಿಗೆ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ ವಿಜಯಪುರ, ಜೂ. 10:
ಜಿಲ್ಲೆಯ ಸಿಂದಗಿ ತಾಲೂಕಿನ ಕೊಕಟನೂರ ಹಾಗೂ ಇಂಡಿ ತಾಲೂಕಿನ ಹಿಂಗಣಿ ಗ್ರಾಪಂ ನಲ್ಲಿ ಗ್ರಾಮ ಒನ್ ಫ್ರಾಂಚೈಸಿಗೆ ಇ- ಆಡಳಿತ ಆನ್ ಲೈನ್ ಅರ್ಜಿ‌ ಆಹ್ವಾನಿಸಿದೆ.
ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್ ಫ್ರಾಂಚೈಸಿಗೆ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ
ಗ್ರಾಮ ಒನ್ ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾ ಸಿಂಧು ಅಡಿ ರೂಪಿಸಲಾಗಿದೆ. ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕೊಕಟನೂರ ಹಾಗೂ ಹಿಂಗಣಿ ಗ್ರಾಪಂನಲ್ಲಿ ಗ್ರಾಮ ಒನ್ ಫ್ರಾಂಚೈಸಿಗೆ ಜೂ. 1 ರಿಂದ ಜೂ. 15 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಆಭ್ಯರ್ಥಿಗಳು https://sevasindhuservices.karnataka.gov.in ಪೋರ್ಟಲ್ ಮುಖಾಂತರ ಸಿಟಿಜನ್ ಲಾಗಿನ್ ಕ್ರಿಯೇಟ್ ಮಾಡಿಕೊಂಡು ನಂತರ ಲಾಗಿನ್ ಆಗಿ ಸರ್ಚ್ ಬಾಕ್ಸ್ ನಲ್ಲಿ ಗ್ರಾಮ ಒನ್ ಫ್ರಾಂಚೈಸಿ ಸರ್ಚ್ ಮಾಡಿ ಸೆಲೆಕ್ಟ್ ಮಾಡಿಕೊಂಡು ಕೇಳಿರುವ ಮಾಹಿತಿಯನ್ನು ಸಮರ್ಪಕವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Share this