ಜೂ. 16,17 ಅಪ್ರೆಂಟಿಸ್ ತರಬೇತಿ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 13:
ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜೂನ್ 16 ಮತ್ತು 17 ರಂದು ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ.
ಧಾರವಾಡದಲ್ಲಿರುಬ ನಿಡೆಕ್ ಇಂಡಿಯಾ ಪ್ರೈ. ಲಿ.‌ ಕಂಪನಿ ತರಬೇತುದಾರ(Production Trainee) ಮತ್ತು ಅಪ್ರಂಟಿಸ್ ತರಬೇತಿಗಾಗಿ ಈ‌ ಕ್ಯಾಂಪಸ್ ಸಂದರ್ಶನ ನಡೆಸಲಿದೆ.
ಐಟಿಐನ‌ ನಾನಾ ಟ್ರೇಡುಗಳಲ್ಲಿ ಪಾಸಾದ ಮತ್ತು ದ್ವಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ 18 ರಿಂದ 25 ವರ್ಷದೊಳಗಿನ ತರಬೇತುದಾರರಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಜಿಲ್ಲೆಯ ನಾನಾ ಐಟಿಐ ಕಾಲೇಜಿನ ತರಬೇತಿದಾರರು ಈ ಆವರಣ ಸಂದರ್ಶನದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರದ ಪ್ರಭಾರ ಪ್ರಾಚಾರ್ಯ ಎಸ್. ಜೆ. ಕರಿಗಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880716694 ಮತ್ತು 9916853605 ಸಂಪರ್ಕಿಸಬಹುದಾಗಿದೆ.

Share this