ಬೈಕ್ ಕಳ್ಳರ ಬಂಧನ: 17 ಮೋಟಾರ್ ಸೈಕಲ್ ವಶ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 10:
ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ್ದ 17 ಮೋಟರ್ ಸೈಕಲ್ ಗಳನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಂದಗಿ ತಾಲೂಕಿನ ಗಣಿಹಾರದ ವೀರಭದ್ರ ಕುಂಬಾರ, ಶ್ರೀಶೈಲ ಬಿರಾದಾರ ಬಂಧಿತ ಆರೋಪಿಗಳು.
ವಿಜಯಪುರ ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 11,00,000 ರೂ. ಮೌಲ್ಯದ 13 ಹೋಂಡಾ ಶೈನ್ ಮೋಟಾರ್ ಸೈಕಲ್‌ಗಳು ಮತ್ತು 4 ಹಿರೋ ಕಂಪನಿಯ ಮೋಟಾರ್ ಸೈಕಲ್‌ಗಳು ಸೇರಿ ಒಟ್ಟು 17 ಮೋಟಾರ್ ಸೈಕಲ್‌ಗಳನ್ನು ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ.
ವಿಜಯಪುರ ಶಹರದಲ್ಲಿ ಇತ್ತೀಚೆಗೆ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ನಗರ ಹೊರವಲಯದ ಇಂಡಿ ರೋಡ ಜ್ಯೋತಿ ಫ್ಯಾಕ್ಟರಿ ಹತ್ತಿರ ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Share