ಸಪ್ತ ಸಾಗರ ವಾರ್ತೆ, ವಿಜಯಪುರ, ನ. 9: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಟಿವಿ9 ವಾಹಿನಿಯ ಹಿರಿಯ ವರದಿಗಾರ ಅಶೋಕ ಯಡಳ್ಳಿ ಅವರು ಭಾನುವಾರ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದಾರೆ.
ಒಟ್ಟು 363 ಮತಗಳಲ್ಲಿ 325 ಮತಗಳು ಚಲಾವಣೆಗೊಂಡಿದ್ದು, ಶೇ.89.53ರಷ್ಟು ಮತದಾನವಾಗಿತ್ತು.
ಅಶೋಕ ಯಡಳ್ಳಿ ಅವರು 268 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸಚ್ಚೆಂದ್ರ ಲಂಬು ಅವರು 53 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ನಾಲ್ಕು ಮತಗಳು ಕುಲಗೆಟ್ಟಿವೆ.
ಅಶೋಕ ಯಡಳ್ಳಿ ಪಡೆದ ಮತಗಳು ಈವರೆಗೆ ದಾಖಲೆಯ ಮಟ್ಟದ ಮತಗಳಾಗಿದ್ದು, ವಿಜಯಪುರ ಘಟಕದ ಚುನಾವಣಾ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ. ಬಳಿಕ ಚುನಾವಣಾಧಿಕಾರಿ ಟಿ.ಕೆ. ಮಲಗೊಂಡ ಅವರು ಅಶೋಕ ಯಡಳ್ಳಿ ಅವರಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಶೋಕ ಯಡಳ್ಳಿ ಅವರು ತಮ್ಮ ಆಯ್ಕೆಗಾಗಿ ಶ್ರಮಿಸಿದ ಹಿರಿಯ ಪತ್ರಕರ್ತರು, ಸಹವರದಿಗಾರರು ಹಾಗೂ ಪರೋಕ್ಷ, ಅಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಜಯದ ಸಂಭ್ರಮದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಹಚ್ಚಿ, ಸಂಭ್ರಮಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಯಡಳ್ಳಿ ಆಯ್ಕೆ


