ಅಸ್ಮಿತಾ ಖೇಲೋ ಇಂಡಿಯಾಗೆ ಯೋಗ ತಂಡ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. ರಾಜ್ಯ ಮಟ್ಟದ ಅಸ್ಮಿತಾ ಖೋಲೋ ಇಂಡಿಯಾ ಯೋಗಾ ಕ್ರೀಡಾಕೂಟಕ್ಕೆ ತಿಡಗುಂದಿ ಮಾನಸ ಗಂಗೋತ್ರಿ ವಸತಿ ಶಾಲೆ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಆ.22ರಂದು ಚಿತ್ರದುರ್ಗದ ಮುರಘಾಮಠದಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಮಾರಿಯಮ್ಮ ಹರಿಜನ, ಭೂಮಿಕಾ ಛಲವಾದಿ, ಕಾವೇರಿ ಢವಳಗಿ, ಹರ್ಷಿತಾ ಹರಿಜನ, ಪ್ರಿಯಾ ಚವ್ಹಾಣ, ವೈಷ್ಣವಿ ರಾಠೋಡ ಆಯ್ಕೆ ಆಗಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸನಗೌಡ ಹರಾನಾಳ, ಬಸವರಾಜ ಬಾಗೇವಾಡಿ ಉತ್ನಾಳ, ಕೃಷ್ಣ ಭಜಂತ್ರಿ,ಮತ್ತು ಭಾಗ್ಯಶ್ರೀ ಚಲವಾದಿ ಅಭಿನಂದಿಸಿದ್ದಾರೆ.

Share