ದಕ್ಷಿಣ ವಲಯ ರೋಲ್ ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ಬಾಲಕಿಯರ ತಂಡಕ್ಕೆ ಬಂಗಾರ ಪದಕ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 4: ಸೆಪ್ಟೆಂಬರ್ 28ರಂದು ಮಲ್ಲಸಂದ್ರ ಮೈದಾನದಲ್ಲಿ ಸೆಪ್ಟೆಂಬರ್ 27 ರಿಂದ 28 ರವರೆಗೆ ಕರ್ನಾಟಕ ರೋಲ್ ಬಾಲ್ ಸಂಸ್ಥೆ ಮತ್ತು ಸ್ಕೇಟಿಂಗ್ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆದ 6ನೇ ದಕ್ಷಿಣ ವಲಯ ರೋಲ್ ಬಾಲ್ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು ಬಂಗಾರ ಪದಕವನ್ನು ಗೆದ್ದಿದ್ದು, ಬಾಲಕರ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದೆ.
ಈ ಸಂದರ್ಭದಲ್ಲಿ ತಂಡದೊಂದಿಗೆ ಕರ್ನಾಟಕ ರಾಜ್ಯ ರೋಲ್ ಬಾಲ್ ಸಂಸ್ಥೆಯ ಅಧ್ಯಕ್ಷ ಪಿ ಕೆ ಭರತಕುಮಾರ, ಕಾರ್ಯದರ್ಶಿ ಚೇತನ ಬಂಡವಾಲ್ಕಾರ, ಕರ್ನಾಟಕ ತಂಡದ ತರಬೇತಿದಾರ ರವಿ ಎಸ್., ಖಜಾಂಚಿ ಮಹೇಂದ್ರಕುಮಾರ, ತರಬೇತಿದಾರರಾದ ಮಣಿಕಂಠ, ಪೃಥ್ವಿಕಾಂತ್ ಅವರು ಭಾಗವಹಿಸಿದ್ದರು ಎಂದು ವಿಜಯಪುರ ಜಿಲ್ಲಾ ರೋಲ್ ಬಾಲ ಸಂಸ್ಥೆ ಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this