
ಕುಂಚದಲ್ಲಿ ಪ್ರಾಚೀನ ಸ್ಮಾರಕಗಳ ಸೆರೆ
ಸಪ್ತಸಾಗರ ವಾರ್ತೆ ವಿಜಯಪುರ, ಸೆ.14: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಹಳೆಯ ತಹಶೀಲದಾರ ಕಚೇರಿ ರಸ್ತೆಯಲ್ಲಿರುವ ಎತ್ತರವಾದ ಐತಿಹಾಸಿಕ ಸ್ಮಾರಕ ಸಾಥಮಂಜಿಲ್ ಹಾಗೂ ಜಲಮಂಜಿಲ್ ಬಳಿ ಶನಿವಾರ ಸಂಜೆ ಮಹಾರಾಷ್ಟ್ರದ ಕೊಲ್ಹಾಪುರದ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳು ಗುಂಪು ಗುಂಪಾಗಿ ಕುಳಿತು ಸ್ಮಾರಕಗಳ ಚಿತ್ರಬಿಡಿಸುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯಿತು.ಕೊಲ್ಹಾಪುರದ ಸುಮಾರು 30 ಜನ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳನ್ನೊಳಗೊಂಡ ತಂಡವು ಪ್ರಾಚೀನ ಸ್ಮಾರಕಗಳ ಚಿತ್ರ ಬಿಡಿಸುವ ಮೂರು ದಿನಗಳ ಶಿಬಿರವನ್ನು ನಗರದಲ್ಲಿ ಹಮ್ಮಿಕೊಂಡಿದೆ.ಶುಕ್ರವಾರ ಇಬ್ರಾಹಿಂ ರೋಜಾ,…