ಕುಂಚಗನೂರ ಗ್ರಾಮದ ಬಳಿ ರೈತ ಮೊಸಳೆಗೆ ಹೇಗೆ ಬಲಿಯಾದ ಗೊತ್ತಾ?
ಸಪ್ತಸಾಗರ ವಾರ್ತೆ,ವಿಜಯಪುರ, ಆ. 23:ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ರೈತನೊಬ್ಬ ಕೃಷ್ಣಾ ನದಿಯಲ್ಲಿ ಮೊಸಳೆಗೆ ಬಲಿಯಾದ ಅವಘಡ ಶನಿವಾರ ಸಂಭವಿಸಿದೆ.ರೈತ ಮೊಸಳೆಗೆ ಹೇಗೆ ಬಲಿಯಾದ ಎಂಬ ಡಿಟೇಲ್ಸ್ ಇಲ್ಲಿದೆ ನೋಡಿ.ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿಎತ್ತುಗಳ ಮೈ ತೊಳೆಯಲು ಹೋಗಿದ್ದಖಾಸಪ್ಪ ಕಂಬಳಿ (38) ಎಂಬುವನನ್ನು ಮೊಸಳೆ ಎಳೆದುಕೊಂಡು ಹೋಗಿದೆ.ರೈತ ಖಾಸಪ್ಪ ಎತ್ತುಗಳ ಮೈ ತೊಳೆಯುವಲ್ಲಿ ಮೈ ಮರೆತಿದ್ದ. ಇದೇ ವೇಳೆ ಹಸಿವಿನಿಂದ ಚಡಪಡಿಸುತ್ತಿದ್ದ ಮೊಸಳೆ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿತ್ತು. ತಡ…


