saptsagar_admin

ಬಿ ಎಲ್ ಡಿ ಇ ಟೀಚರ್ಸ್ ಕಾಲೋನಿಯಲ್ಲಿ ಮಹಾಮೃತ್ಯುಂಜಯ ಜಪ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 8: ರಾಹುಗ್ರಸ್ತ ಚಂದ್ರಗ್ರಹಣ ಅಂಗವಾಗಿ ನಗರದ ಬಿ.ಎಲ್.ಡಿ.ಇ ಟೀಚರ್ಸ್ ಕಾಲನಿಯ ಬಿ. ಎಂ.‌ಪಾಟೀಲ ನಗರದ ಶಿವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಮತ್ತು ಅಶುಭ ಫಲ ಇರುವ ರಾಶಿಯವರಿಗೆ ಶುಭ ಫಲವನ್ನು ಬಯಸಿ ಸಂಕಲ್ಪಿಸಿ ಶ್ರೀ ಫಕೀರಯ್ಯ ಶಾಸ್ತ್ರಿಗಳು ಹಾಗೂ ಶ್ರೀ ಸಿದ್ದರಾಮಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾಮೃತ್ಯುಂಜಯ ಜಪ ನಡೆಯಿತು.ಬಡಾವಣೆಯ ಸದ್ಭಕ್ತರು ಇದರಲ್ಲಿ ಪಾಲ್ಗೊಂಡರು. ಸೋಮವಾರ ಗ್ರಹಣ ಮೋಕ್ಷದ ನಂತರ ಮಹಾಶಿವನಿಗೆ ವಿಶೇಷವಾಗಿ ರುದ್ರಾಭಿಷೇಕ ನೆರವೇರಿಸಿ ಸಮಾಜದ ಒಳಿತಿಗಾಗಿ, ಸಾರ್ವಜನಿಕರ ಆಯುಷ್ಯ ಆರೋಗ್ಯ ಅಭಿವೃದ್ಧಿಗಾಗಿ ಮಹಾಮೃತ್ಯುಂಜಯ…

Read More

ಖಾದಿ ಸ್ವಾಭಿಮಾನ-ಸ್ವಾವಲಂಬನೆ ಸಂಕೇತ- ಮಂಡಳಿ ಅಧ್ಯಕ್ಷ ಬಸನಗೌಡ ತುರವಿಹಾಳ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.8:ಖಾದಿ ಬಟ್ಟೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಖಾದಿ ದೇಶಾಭಿಮಾನದ ಪ್ರತೀಕವಾಗಿದೆ. ಖಾದಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಮಸ್ಕಿ ಶಾಸಕರಾದ ಬಸನಗೌಡ ತುರವಿಹಾಳ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಇಂಡಿ ರಸ್ತೆಯ ಚಾಂದಿನಿ ಫಂಕ್ಷನ್ ಹಾಲ್‍ನಲ್ಲಿ…

Read More

ಸಾಧಕರು ಯಾರೇ ಇರಲಿ ದಸರಾ ಉದ್ಘಾಟನೆ ವಿರೋಧಿಸುವುದು ಸರಿಯಲ್ಲ: ನಿಡುಮಾಮಿಡಿ ಶ್ರೀಗಳು

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 8:ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರು ಯಾರೇ ಆಗಿದ್ದರೂ ಅವರು ಒಪ್ಪಿಕೊಂಡು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವುದಾದರೆ ಅದನ್ನು ಸ್ವೀಕಾರ ಮಾಡಬೇಕು. ವಿರೋಧ ಮಾಡಬಾರದು ಎಂದು ಚನ್ನಮಲ್ಲಿಕಾರ್ಜುನ ಶ್ರೀಗಳು ಪ್ರತಿಕ್ರಿಯೆ ನೀಡಿದರು.ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾನು ಮುಸ್ತಾಕ ಅವರು ದಸರಾ ಉತ್ಸವದ ಉಧ್ಘಾಟನೆ ಮಾಡುವುದು ತಪ್ಪೇನಿಲ್ಲ. ಹಿಂದು, ಮುಸ್ಲಿಂ, ಜೈನ್, ಬೌದ್ಧ ಯಾವುದೇ ಧರ್ಮದವರಿರಲಿ. ಸಾಧಕರು ಪಾಲ್ಗೊಳ್ಳುವುದು ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.ವೀರಶೈವ ಲಿಂಗಾಯತ ಗೊಂದಲವನ್ನು ಮತದಾನದ ಮೂಲಕ ಬಗೆಹರಿಸಿಕೊಳ್ಳಬೇಕು….

Read More

ಸಮರ್ಪಣಾ ಭಾವನೆಯಿಂದ ಸೇವೆ ಸಲ್ಲಿಸಿ: ಪ್ರೊ. ಸಿ. ಎಸ್. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 8: ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ಶ್ರದ್ದೆಯಿಂದ ಅಧ್ಯಯನ ಮಾಡಿ ಸಮರ್ಪಣೆ ಮನೋಭಾವದಿಂದ ಸೇವೆ ಮಾಡುವ ಮೂಲಕ ನ್ಯಾಯ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂದು ಬೆಂಗಳೂರಿನ ಕರ್ನಾಟಕ ಸಂಸದೀಯ ಸುಧಾರಣೆ ಸಂಸ್ಥೆ(ಕೆ.ಐ.ಎಲ್.ಪಿ.ಏ.ಆರ್) ನಿರ್ದೇಶಕ ಪ್ರೊ. ಸಿ. ಎಸ್. ಪಾಟೀಲ ಹೇಳಿದ್ದಾರೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಬುಧವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಕಾನೂನು ವಿದ್ಯಾರ್ಥಿಗಳು…

Read More

ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಗೆ ಬಸವರಾಜ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 8:ಕರಾಟೆ ತರಬೇತಿ ಶಿಕ್ಷಕ ಬಸವರಾಜ ಬಾಗೇವಾಡಿ ಉತ್ನಾಳ ಅವರು ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ದೇಶಿಯ ಮತ್ತು ವಿದೇಶಿಯ ಅನೇಕ ಕ್ರೀಡೆಗಳನ್ನು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಪರಿಚಯಿಸಿ ಸ್ಥಾಪನೆ ಮಾಡಿ ಮತ್ತು ತರಬೇತಿ ನೀಡುತ್ತಿರುವದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಸಕ್ತ ಸಾಲಿನ ಚಡಚಣ ತಾಲೂಕಿನ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಸೆ. 9 ರಂದು ಚಡಚಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಲಿದೆ.ಈ…

Read More

ಮಕ್ಕಳ ಮನೋಲೋಕ ಕುರುಡಾಗಬಾರದು: ಕೆ.ವಿ.ಪ್ರಭಾಕರ

ಸಪ್ತಸಾಗರ ವಾರ್ತೆ ಬೆಂಗಳೂರು, ಸೆ.7:ಮನೆಯೇ ಮೊದಲ ಶಾಲೆ ಎನ್ನುವುದು ಹೋಗಿ ಮೊಬೈಲೇ ಮೊದಲ ಶಾಲೆಯಂತಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.ಪ್ರೆಸ್ ಕ್ಲಬ್ ಮತ್ತು ಬಾಲ ಭವನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಮಕ್ಕಳ ಜಾತ್ರೆ” ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.ನಗರಗಳಲ್ಲಿ ಇರುವ ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟ ಪಾಠಗಳಿಂದ ದೂರ ಆಗಿದ್ದಾರೆ. ವೃದ್ದಾಶ್ರಮಗಳು ಹೆಚ್ಚಾಗುತ್ತಾ ಅಜ್ಜ-ಅಜ್ಜಿ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಜೊತೆಗೆ ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆಯೂ ಕಾಣೆಯಾಗಿ, ಪ್ಲಾಸ್ಟಿಕ್ ಆಟದ…

Read More

ಧಾರವಾಡ ಜಿಲ್ಲೆಯಲ್ಲಿ ಹುಟ್ಟಿದರೂ ಬಸವನಾಡಿನಲ್ಲಿ ಸಹಕಾರಿ ಅಭ್ಯುದಯ : ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ,ಸೆ. 7: ಕೃಷಿ ಆಧಾರಿತ ಗ್ರಾಮೀಣ ಜೀವನ ಉನ್ನತೀಕರಣದಲ್ಲಿ ಸಹಕಾರಿ ರಂಗದ ಕೊಡುಗೆ ಅನುಪಮ. ಸಿದ್ಧನಗೌಡ ಪಾಟೀಲ ಅವರಿಂದ ಅಖಂಡ ಧಾರವಾಡ ಜಿಲ್ಲೆಯಲ್ಲಿ ಜನ್ಮ ಪಡೆದರೂ ಸಹಕಾರಿ ಚಳುವಳಿ ಅಭ್ಯದಯ ಸಾಧಿಸಿರುವುದು ಬಸವನಾಡಿನಲ್ಲಿ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.‌ಭಾನುವಾರ ನಗರದಲ್ಲಿ ಹೊರ್ತಿ ಶ್ರೀಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ವಿಜಯಪುರ ಬಾಗಲಕೋಟೆ ಸೇರಿದಂತೆ ಅಖಂಡ…

Read More

ಸಮಾಜ ಸುಧಾರಣೆಗಾಗಿ ನಾರಾಯಣ ಗುರುಗಳ ಸೇವೆ ಅನನ್ಯ -ಸೋಮಲಿಂಗ ಗೆಣ್ಣೂರ

ಸಪ್ತಸಾಗರ ವಾರ್ತೆ ವಿಜಯಪುರ ಸೆ.7: ಅಂದಿನ ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಮೌಢ್ಯತೆ, ಅಸಮಾನತೆ ನಿವಾರಿಸುವ ಮೂಲಕ ಸಮಾಜ ಸುಧಾರಣೆಗಾಗಿ ಬ್ರಹ್ಮಶ್ರೀ ನಾರಾಯಣಗುರುಗಳು ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಹಯೋಗದಲ್ಲಿ ಭಾನುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೌಢ್ಯತೆ, ಶೋಷಣೆಗಳಿಂದ ತುಂಬಿದ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಬ್ರಹ್ಮಶ್ರೀ ಅವರ…

Read More

ಅಕ್ರಮ ಅಕ್ಕಿ ಸಾಗಾಟ: ಅಕ್ಕಿ ವಶ

ಸಪ್ತಸಾಗರ ವಾರ್ತೆ, ವಿಜಯಪುರ,ಸೆ.7:ನಗರ ಹೊರ ವಲಯದ ಭೂತನಾಳ ಕೆರೆಯ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ,ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.ಭೂತನಾಳ ಕೆರೆ ಹತ್ತಿರ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ರೂ.7,83,760‌ ಮೌಲ್ಯದ 346 ಕ್ವಿಂಟಲ್ 26 ಕೆಜಿ ಅಕ್ಕಿ‌ ಹಾಗೂ ಲಾರಿ ವಶಕ್ಕೆ ಪಡೆದು ಶೇಖರ ಮದ್ಯೆಯನ್ ಎಂಬುವವರ ಮೇಲೆ ಆದರ್ಶ…

Read More

ಶಿಕ್ಷಕ ನಬಿ ಪಟೇಲ್ ವಡಿಗೇರಿ ಸೇವೆ ಶ್ಲಾಘನೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 7: ಹಲಸಂಗಿ ಮಧುರಚೆನ್ನರ ಒಡನಾಡಿಯಾಗಿದ್ದ ನಬಿಪಟೇಲ್ ವಡಗೇರಿ ಶಿಕ್ಷಕರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಣದೊಂದಿಗೆ ಸಾಮಾಜಿಕ ರಂಗದಲ್ಲೂ ಉತ್ಕೃಷ್ಠ ಸೇವೆ ಸಲ್ಲಿಸಿ ಶಿಷ್ಯಬಳಗದ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಹೇಳಿದರು.ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಅಲ್‌ಹಜ್ ನಬಿಪಟೇಲ್ ವಡಗೇರಿಯವರ ಸಂಸ್ಮರಣ ಗ್ರಂಥ ವಡಗೇರಿ ನಮಃ, ಬಿ ಆರ್ ಪೊಲೀಸ್‌ಪಾಟೀಲ ರಚಿಸಿದ ತುಲಾಭಾರ ಪ್ರಸಂಗ ಹಾಗೂ ತುಲಾಭಾರ ನಾಟಕ ಗ್ರಂಥಗಳ ಲೋಕಾರ್ಪಣೆ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ…

Read More