saptsagar_admin

ವಿಜಯಪುರ ಜಿಲ್ಲೆಯನ್ನು 371 ಜೆ ಅಡಿಗೆ ಸೇರಿಸಲು ಆಗ್ರಹಿಸಿ ಪ್ರತಿಭಟನೆ ಮೆರವಣಿಗೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:ವಿಜಯಪುರ ಜಿಲ್ಲೆಯನ್ನು 371 ಜೆ ಅಡಿಯಲ್ಲಿ ಸೇರಿಸುವಂತೆ ಆಗ್ರಹಿಸಿ ರೈತ ಭಾರತ ಪಕ್ಷ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟ ರೈತ ಭಾರತ ಪಕ್ಷದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ವಿಜಯಪುರ ಜಿಲ್ಲೆಯನ್ನು 371 ಜೆ ಗೆ ಸೇರಿಸಲು ಆಗ್ರಹಿಸಿದರು.ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಹಿಂದುಳಿದ ವಿಜಯಪುರ ಜಿಲ್ಲೆಯನ್ನು 371 ಜೆ ಅಡಿಗೆ ಸೇರಿಸದೆ…

Read More

ಆ.7ರಂದು ಮಹಾನಗರ ಪಾಲಿಕೆ ಮಹಾಪೌರ-ಉಪಮಹಾಪೌರ ಫಲಿತಾಂಶ ಘೋಷಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:ವಿಜಯಪುರ ಮಹಾನಗರ ಪಾಲಿಕೆಯ 22ನೇ ಅವಧಿಗೆ 2025-ಜನವರಿ, ಫೆಬ್ರವರಿ ತಿಂಗಳಲ್ಲಿ ಜರುಗಿದ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಯ ಚುನಾವಣೆ ಫಲಿತಾಂಶವನ್ನು ಘೋಷಣೆ ಮಾಡಲು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಆ.7ರಂದು ಮಧ್ಯಾಹ್ನ 1 ಗಂಟೆಗೆ ಸಭೆ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.

Read More

ಜೀವನ್ಮುಕ್ತಿಗೆ ಗುರೂಪದೇಶ ಬೇಕು:ಡಾ. ಮೇತ್ರಿ

ಸಪ್ತಸಾಗರ ವಾರ್ತೆ, ಜು. 31:ಹಿಂದೂಗಳಿಗೆ ಶ್ರಾವಣ ಮಾಸ ಒಂದು ಪವಿತ್ರ ಹಬ್ಬ. ಸತ್ಸಂಗದಲ್ಲಿ ಪಾಲ್ಗೊಂಡು ಪುರಾಣ ಪ್ರವಚನಗಳನ್ನು ಶ್ರವಣ ಮಾಡಿದರೆ ಆತ್ಮಾನಂದ ಪ್ರಾಪ್ತಿಯಾಗುವುದು. ಎಲ್ಲರೂ ಕ್ರಮವಾಗಿ ಶ್ರವಣ,ಜಪ,ತಪ,ಧ್ಯಾನ ಮತ್ತು ದಾನಗಳೆಂಬ ಪಂಚ ಕ್ರಿಯೆಗಳನ್ನು ಸಿದ್ಧಿಸಿಕೊಳ್ಳಬೇಕೆಂದು ಡಾ.ಸಂಗಮೇಶ ಮೇತ್ರಿಯವರು ಹೇಳಿದರು.ವಿಜಯಪುರ ಕೀರ್ತಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರವಚನಕಾರರಾದ ಪ.ಪೂ.ಶ್ರೀ ಸಂಗಮೇಶ ಸ್ವಾಮಿಗಳು ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಪ್ರವಚನವನ್ನು ಶುಭಾರಂಭ ಮಾಡಿದರು. ಸದ್ಭಕ್ತರು ಪ್ರಪಂಚದೊಡನೆ ಪರಮಾರ್ಥ ಸಾಧಿಸಲು ಗುರು ತೋರುವ ಪಥದಲ್ಲಿ…

Read More

11 ಗಂಟೆಯಲ್ಲಿ 20 ಎಕರೆ ಜಮೀನು ಹರಗಿದ ಎತ್ತುಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:11 ಗಂಟೆಗಳಲ್ಲಿ ನಿರಂತರವಾಗಿ 20 ಎಕರೆ ಹೊಲವನ್ನು ಹರಗಿ ಎತ್ತುಗಳು ಸಾಧನೆ ಮಾಡಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆದಿದೆ.ಕುದುರಿ ಸಾಲವಾಡಗಿ ಗ್ರಾಮದ ಗುರುಸ್ವಾಮಿ ಚಿಕ್ಕಮಠ ಅವರ ಎತ್ತುಗಳು ಜಾಗೀರದಾರ ಅವರ ಹೊಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ 4 ಗಂಟೆಯವರೆಗೆಬಿಡದೆ 20 ಎಕರೆ ಜಮೀನು ಹರಗಿ ಸಾಧನೆ ಮಾಡಿವೆ.ಸಾಧನೆ ಮಾಡಿದ ಎತ್ತುಗಳನ್ನು ರೈತರು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂತೋಷ ಹಂಚಿಕೊಂಡರು.ಈ ಸಂದರ್ಭದಲ್ಲಿ ಎತ್ತುಗಳ…

Read More

ವಿಜಯಪುರ ಜಿಲ್ಲೆ ಸಚಿವರು, ಶಾಸಕರ ಜೊತೆಗೆ ಸಿಎಂ ಚರ್ಚೆ

ಸಪ್ತಸಾಗರ ವಾರ್ತೆ, ಬೆಂಗಳೂರು, ಜು. 31:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಜಿಲ್ಲೆ ಸಚಿವರು, ಶಾಸಕರ ಜೊತೆಗೆ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಗುರುವಾರ ಬೆಂಗಳೂರಿನಲ್ಲಿ ಚರ್ಚಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Read More

ಮತಗಳ್ಳತನ: ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಪ್ತಸಾಗರ ವಾರ್ತೆ, ಬೆಂಗಳೂರು, ಜು. 31 :ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬೆಂಗಳೂರಿನ ಹಿಲ್ಟನ್ ಹೋಟೆಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರು ಈ ವಿಷಯ ತಿಳಿಸಿದರು.ಹಾಗಾಗಿ ಅವರು ಆಗಸ್ಟ್ 4 ರಂದು ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದರು.

Read More

ವಿಜಯಪುರ: ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಸಪ್ತಸಾಗರ ವಾರ್ತೆ, ಜು. 31:ಇಲ್ಲಿನ ಮಹಾನಗರ ಪಾಲಿಕೆಯ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.ಪಾಲಿಕೆ ಕಚೇರಿಯ ಮೂರು ವಲಯಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.ಮಹಾನಗರ ಪಾಲಿಕೆಯ ನಿರ್ಲಕ್ಷ್ಯ , ಭ್ರಷ್ಟಾಚಾರದ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

Read More

ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:ಕನ್ನಡ ನವೋದಯದ ಪ್ರಾರಂಭಿಕ ಕಾಲದಲ್ಲಿನ ಮಹತ್ವದ ಬರಹಗಾರರಾದ ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು. ಅವರು ಶಾಸನಗಳು, ಜನಪದ ಸಾಹಿತ್ಯದ ಸಂಶೋಧನೆ ಮಾಡುತ್ತಾ, ಆಧ್ಯಾತ್ಮಿಕ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ಮಧುರಚೆನ್ನರ 122 ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿದ್ದು ಮಧುರಚೆನ್ನರು ಕಾವ್ಯ, ಆತ್ಮಕಥನ, ಸಂಶೋಧನೆ, ಜನಪದ ಸಾಹಿತ್ಯದಂತಹ ಪ್ರಕಾರಗಳಲ್ಲಿ ಮಾಡಿದ…

Read More

ಅವಮಾನ ಎನ್ನದೆ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡಿ: ಡಾ. ಪ್ರಾಣೇಶ ಜಹಾಗೀರದಾರ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 30:ಸಮಾಜ ಸೇವೆಯಲ್ಲಿ ತೊಡಗಿಕೊಂಡವರನ್ನು ಜನ ಮೊದಲು ಅನುಮಾನದಿಂದ ನೋಡುತ್ತಾರೆ. ಆನಂತರ ಅಸೊಯೆಯಿಂದ ಅವಮಾನಿಸುತ್ತಾರೆ, ಇವೆರಡನ್ನು ಮೆಟ್ಟಿ ಮೇಲೇರಿದಾಗ ಸನ್ಮಾನಿಸುತ್ತಾರೆ. ಈ ರೀತಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾಮಾಜಿಕ ಕಾರ್ಯ ಮಾಡಬೇಕೆಂದು ಅಂತರಾಷ್ಟಿಯ ರೋಟರಿ ಜಿಲ್ಲೆ 3170ರ ಮಾಜಿ ಜಿಲ್ಲಾ ಪ್ರಾಂತಪಾಲರಾದ ಡಾ.ಪ್ರಾಣೇಶ ಜಹಾಗೀರದಾರ ಅವರು ಹೇಳಿದರು.ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಕ್ಲಬ್ 25 ವರ್ಷ ಪೂರೈಸಿದ ನೆನಪಿಗಾಗಿ ಹೊರತಂದ ಬೆಳ್ಳಿಮಹೋತ್ಸವ…

Read More

ತೋಟದ ಮನೆ ನಿರ್ಮಾಣಕ್ಕೆ, ಹೈನೋದ್ಯಮಕ್ಕೆ ವಿಡಿಸಿಸಿ ಬ್ಯಾಂಕ್ ಸಾಲ: ಸಚಿವ ಶಿವಾನಂದ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 30:ಜಿಲ್ಲೆಯ ರೈತರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಸಾಲದ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಅದರಿಂದ ರೈತರೇ ಸಾಲ ನೀಡುವಂತೆ ಅಂದರೆ ಜಿಲ್ಲಾ ಕೇಂದ್ರ ಬ್ಯಾಂಕ್ ನಲ್ಲಿ ಲಕ್ಷಾಂತರ ರೂ. ಠೇವಣಿ ಇಡುವಂತೆ ಆರ್ಥಿಕ ಉನ್ನತಿ ಸಾಧಿಸಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಕಿವಿ…

Read More