saptsagar_admin

ಓದು ಅಭಿಯಾನದಿಂದ ಈದ್ ಮಿಲಾದ ಹಬ್ಬದ ವಿಷಯ ಕೈಬಿಡಿ: ಶಾಸಕ ಯತ್ನಾಳ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 2:ಪ್ರಾಥಮಿಕ ಶಾಲಾ ಮಕ್ಕಳಿಗೆ 21 ದಿನಗಳ ಓದುವ ಅಭಿಯಾನದಲ್ಲಿ ಈದ್ ಮಿಲಾದ್ ಹಬ್ಬ ಪ್ರಸ್ತಾಪ ಕೈ ಬಿಡುವಂತೆ ಸರ್ಕಾರಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹಿಸಿದ್ದಾರೆ.ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಒಂದೇ ಕೋಮಿನ ಹಬ್ಬದ ಬಗ್ಗೆ ಓದಿ ಎಂದು ಮಕ್ಕಳಿಗೆ ಹೇಳುವುದು ತಪ್ಪು ಎಂದು ಹೇಳಿದರು.ಸರ್ಕಾರ ತಕ್ಷಣವೇ ಓದು ಅಭಿಯಾನದಿಂದ ಈದ್ ಮಿಲಾದ್ ಹಬ್ಬದ ವಿಷಯ ತೆಗೆದು ಹಾಕುವಂತೆ ಒತ್ತಾಯ ಮಾಡಿದರು.ಹಿಂದೂ ಹಬ್ಬಗಳಾದ ದೀಪಾವಳಿ, ದಸರೆ,ಕ್ರಿಶ್ಚಿಯನ್, ಬೌದ್ಧ, ಜೈನ…

Read More

ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ,ಸೆ.2 :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌ಯ ವತಿಯಿಂದ ಬಾಲಕರಿಗಾಗಿ ಹೊಯ್ಸಳ ಮತ್ತು ಬಾಲಕಿಯರಿಗಾಗಿ ಕೆಳದಿ ಚನ್ನಮ್ಮ ಪ್ರಶಸ್ತಿಗಾಗಿ ನಾವೀನ್ಯತೆ,ತಾರ್ಕಿಕ ಸಾಧನೆಗಳು,ಕ್ರೀಡೆ,ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಪ್ರತಿ ಕ್ಷೇತ್ರದಿಂದ ಇಬ್ಬರು ಮಕ್ಕಳಂತೆ ಎಂಟು ಮಕ್ಕಳನ್ನು ಆಯ್ಕೆ ಮಾಡಲಾಗುವುದು.ಈ ಪ್ರಶಸ್ತಿಯು ತಲಾ ರೂ.10 ಸಾವಿರ ನಗದು ಬಹುಮಾನ ಒಳಗೊಂಡಿದ್ದು, 5 ರಿಂದ 18 ವರ್ಷದೊಳಗಿನ ಮಕ್ಕಳು ಅಗತ್ಯ ದಾಖಲೆ ಸಹಿತ ಸೆಪ್ಟೆಂಬರ್ 30…

Read More

ನೈಋತ್ಯ ರೈಲ್ವೆಯಿಂದ ₹1 ಕೋಟಿ ವಿತರಣೆ, ಮೃತ ಉದ್ಯೋಗಿ ಕುಟುಂಬಕ್ಕೆ ನೆರವು

ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಸೆ. 1: ನೈಋತ್ಯ ರೈಲ್ವೆಯು ತನ್ನ ರೈಲ್ವೆ ವೇತನ ಪ್ಯಾಕೇಜ್ (RSP) ಯೋಜನೆಯಡಿಯಲ್ಲಿ ಹುಬ್ಬಳ್ಳಿ ವಿಭಾಗದ ಮೃತ ಉದ್ಯೋಗಿಯ ಕುಟುಂಬಕ್ಕೆ ₹1 ಕೋಟಿ ಆರ್ಥಿಕ ನೆರವು ನೀಡಿದೆ. ಮಾರ್ಚ್ 2025 ರಲ್ಲಿ ನಿಧನರಾದ ಹುಬ್ಬಳ್ಳಿ ವಿಭಾಗದ ಆಸ್ಪತ್ರೆ ಸಹಾಯಕ ದಿವಂಗತ ಶ್ರೀ ಚನ್ನಬಸಪ್ಪ ಕುಂಬಾರ ಅವರ ಕುಟುಂಬಕ್ಕೆ ಈ ನೆರವು ನೀಡಲಾಗಿದೆ.ಈ ಕ್ಲೈಮ್ ಮೊತ್ತವನ್ನು ಆಗಸ್ಟ್ 28, 2025 ರಂದು ದಿವಂಗತ ಉದ್ಯೋಗಿಯ ಪತ್ನಿ ಶ್ರೀಮತಿ ಮಲ್ಲಮ್ಮ ಕುಂಬಾರ ಅವರ ಬ್ಯಾಂಕ್ ಖಾತೆಗೆ…

Read More

ವಾಹನ ಖರೀದಿಗೆ ಮೀನುಗಾರರಿಂದ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.1: ಮೀನುಗಾರಿಕೆ ಇಲಾಖೆಯಿಂದ 2025-26ನೇ ಸಾಲಿನ ರಾಜ್ಯ ವಲಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ನಾಲ್ಕು ಚಕ್ರ ವಾಹನ ಖರೀದಿಸಲು ಸಹಾಯಧನ ಪಡೆಯಲು ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಮೀನುಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು.ಅರ್ಜಿಯನ್ನು ಸೆಪ್ಟಂಬರ್ 15ರೊಳಗಾಗಿ ಜಿಲ್ಲೆಯ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ…

Read More

ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 1: ಸೆ.6 ಮತ್ತು 7 ರಂದು ನಗರದ ಕೆ.ಎಸ್. ಆರ್.ಟಿ. ಸಿ ಡಿಪೋ ನಂಬರ್ 2ರ ಬಳಿ ಇರುವ ಅಭಿನವ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪ್ರಥಮ ಕರ್ನಾಟಕ ರಾಜ್ಯ ಮಟ್ಟದ ಸೂರ್ಯನಮಸ್ಕಾರ ಕ್ರೀಡಾಕೂಟವು ಜರಗುವದು.ಸೂಪರ್ ಮಿನಿ 9 ವರ್ಷದ ಒಳಗಡೆ ಬಾಲಕ, ಬಾಲಕಿಯರು, ಮಿನಿ 12 ವರ್ಷದ ಒಳಗಡೆ ಬಾಲಕ, ಬಾಲಕಿಯರು ಮತ್ತು, 14 ವರ್ಷದ ಒಳಗಡೆ ಬಾಲಕ ಬಾಲಕಿಯರು, 18 ವರ್ಷದ ಒಳಗಡೆ ಬಾಲಕ, ಬಾಲಕಿಯರು, ಹಾಗೂ 18 ವರ್ಷದ…

Read More

ಐತಿಹಾಸಿಕ ಸ್ಮಾರಕಗಳ ದುರಸ್ತಿಗೆ ಮಹಾ ನಿರ್ದೇಶಕರಿಗೆ ಕಲಾಲ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 1:ಗುಮ್ಮಟ ನಗರಿ ವಿಜಯಪುರದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗಿದ್ದು ಅವುಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಡಿ.ಎಚ್. ಕಲಾಲ ಅವರುಕಾಂಗ್ರೆಸ್ ನಾಯಕ ಡಿ.ಎಚ್.ಕಲಾಲ್ ನವದೆಹಲಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಹಾನಿರ್ದೇಶಕ ಯದುಬೀರ್ ಸಿಂಗ್ ರಾವತ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.ವಿಜಯಪುರದಲ್ಲಿ ಇತ್ತೀಚಿಗೆ ಸೇರಿದ ಭಾರಿ ಮಳೆಯಿಂದಾಗಿ ನಗರದಲ್ಲಿನ ಪ್ರಮುಖ ಐತಿಹಾಸಿಕ ಸ್ಮಾರಕಗಳು ಹಾನಿಗೀಡಾಗಿವೆ. ಅವುಗಳ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ…

Read More