saptsagar_admin

ಸಪ್ತಸಾಗರ ವರದಿಗೆ ಫಲಶ್ರುತಿ: ಭವ್ಯ ರೂಪ ಪಡೆಯಲಿದೆ ವಿಜಯಪುರದ ಗಾಂಧಿ ವೃತ್ತ!

ಸಪ್ತಸಾಗರ ವಾರ್ತೆ,ವಿಜಯಪುರ, ಆ. 30:ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್‌ ನಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿ ಚಿಕ್ಕದಾಗಿದ್ದು, ಸಂಚಾರದ ಒತ್ತಡದ ನಡುವೆ ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಐತಿಹಾಸಿಕ ವಿಜಯಪುರದ ಘನತೆಗೆ ತಕ್ಕಂತೆ ಸುಂದರ ಹಾಗೂ ಭವ್ಯ ಗಾಂಧಿ ವೃತ್ತ ಹಾಗೂ ಪುತ್ಥಳಿ ನಿರ್ಮಿಸಬೇಕೆಂಬ ಕುರಿತು ಸಪ್ತಸಾಗರ ಕನ್ನಡ ದಿನಪತ್ರಿಕೆ ವರದಿ ಪ್ರಕಟಿಸಿತ್ತು.ಈ ವರದಿಗೆ ಇದೀಗ ಫಲಶ್ರುತಿ ದೊರೆತಿದ್ದು, ಗಾಂಧಿ ವೃತ್ತದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಅಕ್ಟೋಬರ್ 2ರಂದು ಜಿಲ್ಲಾ ಉಸ್ತುವಾರಿ ಸಚಿವರು ನೂತನ ಗಾಂಧಿ ವೃತ್ತದ ನಿರ್ಮಾಣಕ್ಕೆ…

Read More

ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಜಯಪುರದ ಶಿಫಾ ಜಮಾದಾರ ಧ್ವನಿ

ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವಂತೆ ಮನವಿ ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:ವಿಕಸಿತ ಭಾರತ ಯುವ ಸಂಪರ್ಕ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಯೋಜಿಸಲಾದ ‘ಖೇಲೋ ಇಂಡಿಯಾ ಸಂವಾದ್–ಖೇಲ್ ಕಿ ಬಾತ್, ಪಿಎಂ ಮೋದಿ ಕೆ ಸಾಥ್’ ಕಾರ್ಯಕ್ರಮದಲ್ಲಿ ವಿಜಯಪುರ ಮೂಲದ ಪ್ರತಿಭಾವಂತ ಯುವತಿ ಶಿಫಾ ಜಮಾದಾರ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅಭಿವೃದ್ಧಿ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಭುವನೇಶ್ವರದ ಐಐಟಿಯಲ್ಲಿ ನಡೆದ ಸಂವಾದ…

Read More

ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿ: ಬಡ ಮಹಿಳೆಗೆ ಬಿಎಲ್‌ಡಿಇ ಆಸ್ಪತ್ರೆ ವೈದ್ಯರಿಂದ ಮರುಜೀವ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:ತೀವ್ರ ಪ್ರಮಾಣದ ಮೆದುಳಿನ ರಕ್ತಸ್ರಾವದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ 47 ವರ್ಷದ ರೇಣವ್ವ ನಾಲತವಾಡ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ವೈದ್ಯರ ತಂಡ ಕ್ಲಿಷ್ಟಕರ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದೆ.ರೇಣವ್ವ ಅವರು ಗ್ರೇಡ್–4 ಸಬ್ ಅರಾಕ್‌ನಾಯ್ಡ್ ಹೆಮರೇಜ್ (SAH) ಹಾಗೂ ಬಲಭಾಗದ ಮಿಡಲ್ ಸೆರೆಬ್ರಲ್ ಆರ್ಟರಿ (MCA) ಬೈಫರ್ಕೇಶನ್ ಅನ್ಯುರಿಸಮ್ನಿಂದ ಬಳಲುತ್ತಿದ್ದರು. ಅನ್ಯುರಿಸಮ್ ಛಿದ್ರಗೊಂಡ…

Read More

ಕ್ರೀಡೆಯಿಂದಲೇ ಪರಿಪೂರ್ಣ ಶಿಕ್ಷಣ: ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಆ. 29: ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪರಿಪೂರ್ಣ ಶಿಕ್ಷಣಕ್ಕೆ ಕ್ರೀಡೆ ಅತ್ಯಗತ್ಯ. ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಸದೃಢತೆ, ಮಾನಸಿಕ ಸ್ಥೈರ್ಯ ಹಾಗೂ ಶಿಸ್ತು ಬೆಳೆಯುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮೇಜರ್ ಧ್ಯಾನಚಂದ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಯಿಲ್ಲದ ಶಿಕ್ಷಣ ಅಪೂರ್ಣ. ಪ್ರತಿಯೊಂದು ಆಟದ ಉದ್ದೇಶ ಹಾಗೂ ಅದರಲ್ಲಿರುವ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು…

Read More

ಅಕ್ಟೋಬರ್ 2ರಂದು ಗಾಂಧಿ ವೃತ್ತ ನವೀಕರಣಕ್ಕೆ ಶಂಕುಸ್ಥಾಪನೆ: ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಗಾಂಧಿ ವೃತ್ತವನ್ನು ನವೀಕರಿಸಿ, ಭವ್ಯವಾದ ಮಹಾತ್ಮ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಗಾಂಧಿ ವೃತ್ತದ ನವೀಕರಣದ ವಿನ್ಯಾಸ, ರೂಪುರೇಷೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ…

Read More

‘ಸಿ.ಎಸ್. ನಾಡಗೌಡ ನಾಟಕಕಾರ; ಡ್ರಾಮಾ ಮಾಡುವುದರಲ್ಲಿ ನಂಬರ್ ಒನ್’- ನಡಹಳ್ಳಿ ವಾಗ್ದಾಳಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:‘ನನಗೆ ಸಚಿವ ಸ್ಥಾನ ತಪ್ಪಿಸಿದ್ದು ಸಚಿವ ಎಂ.ಬಿ. ಪಾಟೀಲರು’ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಮಾಡಿರುವ ಆರೋಪಕ್ಕೆ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.‘ಸಿ.ಎಸ್. ನಾಡಗೌಡರು ನಾಟಕ ಮಾಡುವುದರಲ್ಲಿ ನಂಬರ್ ಒನ್. ಅವರ ನಾಟಕವನ್ನು ಯಾರೂ ನಂಬಬಾರದು. ಏಕೆಂದರೆ ಅವರು ಸಂದರ್ಭಕ್ಕೆ ತಕ್ಕಂತೆ ತಮ್ಮ ನಿಲುವು ಬದಲಾಯಿಸುತ್ತಾರೆ’ ಎಂದು ನಡಹಳ್ಳಿ ಟೀಕಿಸಿದರು.ವಿಜಯಪುರ ನಗರದಲ್ಲಿ ಮಾತನಾಡಿದ ಅವರು, 2013ರಲ್ಲಿ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗುವುದಕ್ಕೆ…

Read More

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಇಂಗ್ಲಿಷ್ ಪ್ರವಚನಗಳ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಕೃತಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ.29:ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಇಂಗ್ಲಿಷ್‌ನಲ್ಲಿ ನೀಡಿರುವ ಪ್ರವಚನಗಳ ಸಂಗ್ರಹವಾದ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಕೃತಿಯನ್ನು ಲೇಖಕ ಎಂ. ಎಸ್. ಚಾಂದಕವಟೆ ಅವರು ಕೈಗಾರಿಕೆ, ಮೂಲಸೌಲಭ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಶನಿವಾರ ನಗರದ ಗೃಹ ಕಚೇರಿಯಲ್ಲಿ ಹಸ್ತಾಂತರಿಸಿದರು.ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸಾಯಿನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯುಸ್ ಸಂಸ್ಥೆ ಪ್ರಕಟಿಸಿರುವ ಈ ಕೃತಿ ಆ.17ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಯಾಗಿತ್ತು.ಸಿದ್ದೇಶ್ವರ ಶ್ರೀಗಳ…

Read More

“ಕುಮಟಗಿ ಅರಮನೆ, ಚಟ್ಟರಕಿ ದೇಗುಲ ಅಭಿವೃದ್ಧಿಗೆ ಜಿಲ್ಲಾಡಳಿತ ಚಿತ್ತ”ಮೂಲಸೌಕರ್ಯಕ್ಕೆ ತಕ್ಷಣ ಕ್ರಮ; ‘ಸ್ವದೇಶ ದರ್ಶನ್’ ಯೋಜನೆಯಡಿ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ-ಡಿಸಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 28:ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವಿಶೇಷ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಕುಮಟಗಿ ಹಾಗೂ ಚಟ್ಟರಕಿ ಗ್ರಾಮದ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕುಮಟಗಿ ಅರಮನೆಗೆ ಹೊಸ ರೂಪ ಕುಮಟಗಿ ಗ್ರಾಮದ ಆದಿಲ್ ಶಾಹಿ ಕಾಲದ ಬೇಸಿಗೆ ಅರಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅರಮನೆಯ ವಿಶಿಷ್ಟ…

Read More

ವಿಜಯಪುರ ಜಿಲ್ಲೆಯಲ್ಲಿ SIR ಅಂಕಿಅಂಶಗಳೇ ಆತಂಕಕಾರಿ

2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗೆ; 1.52 ಲಕ್ಷ ‘ಸ್ಥಳಾಂತರಿತ’ — ವಿಜಯಪುರ ನಗರದಲ್ಲೇ 79,737 ಹೆಸರುಗಳು ಸಪ್ತಸಾಗರ ವಾರ್ತೆ,ವಿಜಯಪುರ, ಆ.28:ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವಿಜಯಪುರ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ಭಾರೀ ಬದಲಾವಣೆಗಳಿಗೆ ಕಾರಣವಾಗಿದ್ದು, ಸುಮಾರು 2.97 ಲಕ್ಷ ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವಿಜಯಪುರ ಜಿಲ್ಲಾ SIR ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿ ಆಕ್ಷೇಪ ವ್ಯಕ್ತಪಡಿಸಿವೆ.ಮತದಾರರ…

Read More

ಪ್ರೀತಿ, ವಿಶ್ವಾಸ, ಸಹೋದರತೆಯ ಸಂಕೇತ ರಾಖಿ: ಹಾಸಿಂಪೀರ ವಾಲೀಕಾರ

ಸಪ್ತಸಾಗರ ವಾರ್ತೆ,ವಿಜಯಪುರ, ಆ.28:ಅಣ್ಣ–ತಂಗಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ. ಸಹೋದರಿಯರು ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ರಕ್ಷಣೆಯ ಸಂಕೇತ ನೀಡಿದರೆ, ಸಹೋದರರು ಸಹೋದರಿಯರ ರಕ್ಷಣೆ ಹಾಗೂ ಬೆಂಬಲಕ್ಕೆ ಸದಾ ನಿಲ್ಲುವ ಭರವಸೆ ನೀಡುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.ನಗರದ ದರ್ಗಾ ಆವರಣದಲ್ಲಿರುವ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಕ್ಷಾ ಬಂಧನ ಕೇವಲ…

Read More