saptsagar_admin

ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ: ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಭೀತಿ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 22:ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಹಾರಾಷ್ಟ್ರದ ಉಜನಿ ಜಲಾಶಯದಿಂದ‌ 1.80 ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.ಇದರಿಂದಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯ ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾಂದಾರ್ ಕಂ ಬ್ರಿಡ್ಜ್ ಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಹೀಗಾಗಿ ಮಹಾರಾಷ್ಟ್ರಕರ್ನಾಟಕ ಸಂಪರ್ಕ ಕಡಿತವಾಗಿದೆ.ಚಡಚಣ ತಾಲೂಕಿನಲ್ಲಿ ಬರುವಉಮರಜ – ಭಂಡಾರಕವಟೆ,ಶಿರನಾಳ – ಔಜ್, ಉಮರಾಣಿ – ಸಹದೇವಪುರ ಬಾಂದಾರ್ ಕಂ ಬ್ರಿಡ್ಜ್ ಮುಳುಗಡೆಯಾಗಿವೆ.ಇಂಡಿ ತಾಲೂಕಿನ…

Read More

ವಿಶೇಷ ಚೇತನರು ಬುದ್ದನ ಮಕ್ಕಳು: ಕೆ.ವಿ.ಪ್ರಭಾಕರ್

ಸಪ್ತಸಾಗರ ವಾರ್ತೆ,ಬೆಂಗಳೂರು ಆ.22:ಭಿನ್ನ, ವಿಭಿನ್ನ ಸಾಧ್ಯತೆಗಳ ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ‌ ಸಣ್ಣತನಗಳಿಂದ ಮುಕ್ತರಾದವರು. ಹೀಗಾಗಿ ಇವರೆಲ್ಲರೂಬುದ್ದನ ಮಕ್ಕಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬಣ್ಣಿಸಿದರು.ಬಾಲಭವನದಲ್ಲಿ ನಡೆದ “ವಿಶೇಷ ಚೇತನ ಮಕ್ಕಳ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭಿನ್ನ ಚೇತನರನ್ನು ಸಮಾಜದ ಅಸಹಜ ರೂಢಿಗತ ಕಣ್ಣುಗಳಿಂದ ನೋಡುವುದಕ್ಕಿಂತ ಮನುಷ್ಯ ಸಹಜ ಒಳಗಣ್ಣುಗಳಿಂದ ಗಮನಿಸಬೇಕಿದೆ.ಈ ಮಕ್ಕಳು ಜೀವನ ಪರ್ಯಂತ ಮಕ್ಕಳಾಗೇ ಇರುತ್ತಾರೆ. ಅಂದರೆ ಮಗುವಿನ ಸಹಜ ನಿಷ್ಕಲ್ಮಷ ಸ್ವಭಾವ ಜೀವನವಿಡೀ ಇರುತ್ತದೆ.*ಈ…

Read More

ಮನೆಗೆ ನುಗ್ಗಿದ ಉಡಾ: ನಿವಾಸಿಗಳಿಗೆ ಆತಂಕ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 22:ಭಾರಿ ಗಾತ್ರದ ಉಡಾವೊಂದು ಮನೆಗೆ ನುಗ್ಗಿದ್ದರಿಂದ ಮನೆಯವರು ಆತಂಕಕ್ಕೀಡಾದ ಘಟನೆ ನಗರದ ಕೀರ್ತಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.ಕೀರ್ತಿ ನಗರದ ನಿವಾಸಿ ಆರ್.ಎಂ. ಬಿರಾದಾರ ಎಂಬುವರ‌ ಮನೆಯ ಶೌಚಾಲಯಕ್ಕೆ ಭಾರಿ ಗಾತ್ರದ ಉಡಾ ನುಳಿಸಿದ್ದರಿಂದ ಮನೆಯವರು ಗಾಬರಿಯಿಃದ ಆತಂಕಗೊಂಡರು.ಮೊಸಳೆ ಆಕಾರದ ಸರಿಸೃಪವನ್ನು ಉಡಾ ಎಂದು ಕರೆಯುತ್ತಾರೆ.ನಗರದಲ್ಲಿ ಇತ್ತೀಚೆಗೆ ಸುರಿದಿದ್ದ ಸತತ ಮಳೆಯಿಂದ ಉಡಾ ಬಿಲದಿಂದ ಹೊರ ಬರುತ್ತಿವೆ.ಸರಿಸೃಪ ಪ್ರಾಣಿಗಳು ಬಿಸಿ ಪ್ರದೇಶಗಳಿಗೆ ವಲಸೆಗೊಂಡು ಮನೆಗಳಿಗೆ ನುಗ್ಗುತ್ತಿರುವುದರಿಂದ ಜನರು ಗಾಬರಿಗೊಂಡಿದ್ದು, ಸಂಬಂಧಿಸಿದ ಇಲಾಖೆಯವರು ಸಾರ್ವಜನಿಕರ…

Read More

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 22:ಪ್ರಸಕ್ತ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಸುಜ್ಞಾತಾ ಕುಲಕರ್ಣಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ. ರಾಜ್ಯದ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದ…

Read More

ಏಷಿಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ವಿಜೇತ ಕ್ರೀಡಾಪಟುಗಳಿಗೆ ಸಿಎಂ ಅಭಿನಂದನೆ

ಸಪ್ತಸಾಗರ ವಾರ್ತೆ, ಬೆಂಗಳೂರು, ಆ. 21:ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೇಗವಾದ ಸ್ಕೇಟರ್ ಹಾಗೂ ಡಬಲ್ ಸಿಲ್ವರ್ ಪದಕ ವಿಜೇತ ಕ್ರೀಡಾಪಟುಗಳಿಗೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಕಚೇರಿಯಲ್ಲಿ ಅಭಿನಂದಿಸಿದರು.ಕ್ರೀಡಾಪಟುಗಳಾದ ವೇಗವಾದ ಸ್ಕೇಟರ್ ಧನುಷ್ ಬಾಬು ಮತ್ತು ಸಿಲ್ವರ್ ಪದಕ ವಿಜೇತೆ ಕು. ಪೂರ್ವಿ ಮಠೆ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಧನೆಯನ್ನು ಪ್ರಶಂಶಿಸಿ ಅಭಿನಂದಿಸಿದ್ದಾರೆ.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರೂ, ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಅವರು ಉಪಸ್ಥಿತರಿದ್ದರು.

Read More

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗೆ ಆಹ್ವಾನ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 21:ಜಿಲ್ಲೆಯ ಇಂಡಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯ‌ನ್ನು ಇಂಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ಆ.19 ರಿಂದ ಸೆ.1 ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪುರಾಣ ಮಹಾಮಂಗಲ ಕಾರ್ಯಕ್ರಮ ಆ.25ಕ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 21: ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಉದಯಲಿಂಗೇಶ್ವರ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತರ ಜರುಗಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣದ ಮಹಾಮಂಗಲ ಕಾರ್ಯಕ್ರಮ ಆಗಸ್ಟ 25 ಕ್ಕೆ ಪೀಠಾಧ್ಯಕ್ಷ ಶ್ರೀ ಮ ಘ ಚ ಚನ್ನಮಲ್ಲಿಕಾರ್ಜುನ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗುವದು.ಅಂದು ಬೆಳಿಗ್ಗೆ 7 ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಹಾಪೂಜೆ, 9 ಕ್ಕೆ ಶ್ರೀ ಉದಯಲಿಂಗೇಶ್ವರ ರಜತ ಮೂರ್ತಿಯ ಭವ್ಯ ಅಡ್ಡ ಪಲ್ಲಕ್ಕಿ ಮಹೋತ್ಸವವು…

Read More

ಬೆಂಗಳೂರಿನಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕ್ಯಾಂಪಸ್ ಶೀಘ್ರ ಆರಂಭ:

ಸಪ್ತಸಾಗರ ವಾರ್ತೆ, ವಿಜಯಪುರ, ಆ. 21:ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಕ್ಯಾಂಪಸ್‍ ಅನ್ನು ಸ್ಥಾಪಿಸುತ್ತಿದೆ ಎಂದು ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, Engineering, Computer Applications, Business Administration, Pharmacy, Law, Architecture, Design and Applied Sciences ಸೇರಿದಂತೆ ಹಂತ ಹಂತವಾಗಿ 8-10 ಕಾಲೇಜುಗಳನ್ನು ಆರಂಭಿಸಲಿದೆ. ಇದಲ್ಲದೇ ಅಂತಾರಾಷ್ಟ್ರೀಯ ಶಾಲೆಯನ್ನೂ ಸಹ ಪ್ರಾರಂಭಿಸಲು ಯೋಜಿಸಿದೆ ಎಂದರು.ವಿವಿ ಈಗಾಗಲೇ ಇಂಜಿನಿಯರಿಂಗ್ ಮಹಾವಿದ್ಯಾಲಯ ಹೊಂದಿದ್ದು,ಬಿ.ಎಲ್.ಡಿ.ಇ….

Read More

ಅಸ್ಮಿತಾ ಖೇಲೋ ಇಂಡಿಯಾಗೆ ಯೋಗ ತಂಡ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. ರಾಜ್ಯ ಮಟ್ಟದ ಅಸ್ಮಿತಾ ಖೋಲೋ ಇಂಡಿಯಾ ಯೋಗಾ ಕ್ರೀಡಾಕೂಟಕ್ಕೆ ತಿಡಗುಂದಿ ಮಾನಸ ಗಂಗೋತ್ರಿ ವಸತಿ ಶಾಲೆ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.ಆ.22ರಂದು ಚಿತ್ರದುರ್ಗದ ಮುರಘಾಮಠದಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಮಾರಿಯಮ್ಮ ಹರಿಜನ, ಭೂಮಿಕಾ ಛಲವಾದಿ, ಕಾವೇರಿ ಢವಳಗಿ, ಹರ್ಷಿತಾ ಹರಿಜನ, ಪ್ರಿಯಾ ಚವ್ಹಾಣ, ವೈಷ್ಣವಿ ರಾಠೋಡ ಆಯ್ಕೆ ಆಗಿದ್ದಾರೆ.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸನಗೌಡ ಹರಾನಾಳ, ಬಸವರಾಜ ಬಾಗೇವಾಡಿ ಉತ್ನಾಳ, ಕೃಷ್ಣ ಭಜಂತ್ರಿ,ಮತ್ತು ಭಾಗ್ಯಶ್ರೀ ಚಲವಾದಿ ಅಭಿನಂದಿಸಿದ್ದಾರೆ.

Read More

ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 20:ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಪಂಗಡದ ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಸ್ವಯಂ ಉದ್ಯೋಗ ನೇರಸಾಲ ಯೋಜನೆ ಘಟಕ ಯೋಜನೆಯಡಿ1 ಲಕ್ಷ ರೂ. ಸಹಾಯಧನ ಹಾಗೂ 50 ಸಾವಿರ ರೂ. ಬೀಜಧನ (ಶೇ 4 ರಷ್ಟು ಬಡ್ಡಿ ದರ). ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ-ಹಸುಗಳಿಗೆ ಘಟಕ ವೆಚ್ಚದ ಶೇ. 50 ರಷ್ಟು ಅಥವಾ ಗರಿಷ್ಟ 1.25ಲಕ್ಷ ರೂ.ಗಳ ಸಹಾಯಧನ….

Read More